ಮಂಜೇಶ್ವರ: ಭೂಮಿಯ ಮೂಲ ಪುತ್ರರು ಬಾಕುಡರು. ನಾಗಾರಾಧನೆಯ ಮೂಲಕ ತುಳುನಾಡ ಆಚಾರ-ವಿಚಾರ, ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಮೂಲಕ ಪೂರ್ವ ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದವರು ಬಾಕುಡ ಸಮಾಜವಾಗಿದೆ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡರವರು ನುಡಿದರು.
ಅವರು ಇಚ್ಲಂಗೋಡು ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರೀ ದೈವಸ್ಥಾನದಲ್ಲಿ ಇತ್ತೀಚೆಗೆ ಸಿರಿಮುಡಿ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆದ ಬಾಕುಡ ಸಮಾಜ ಸೇವಾ ಸಮಿತಿ ಹಾಗೂ 18 ದೈವಸ್ಥಾನಗಳ ಸಹಭಾಗಿತ್ವದಲ್ಲಿ ಭೂಮಿಪುತ್ರರಾಗಿರುವ ಬೈಲ ಬಾಕುಡ ಸಮುದಾಯದ ನಾಗಾರಾಧನೆ, ದೈವರಾಧನೆಯ ಮಹತ್ವ, ಜನಪದ ಸಾಹಿತ್ಯ, ತುಳುಭಾಷೆ, ಸಂಸ್ಕೃತಿಯ ಅಭ್ಯುದಯಕ್ಕೆ ಬಾಕುಡ ಸಮುದಾಯದ ಕೊಡುಗೆ ಎಂಬ ಸಂಶೋಧನಾ ಕೃತಿಯಾದ "ಸಿರಿಮುಡಿ" ಸಂಶೋಧನಾ ಕೃತಿ ಬಿಡುಗಡೆ ಸಮಾರಂಭದಲ್ಲಿ "ಸಿರಿಮುಡಿ" ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮೂಲಕೃಷಿ ಸಂಸ್ಕೃತಿಯನ್ನು ಮೂಲ ಕಸುಬನ್ನಾಗಿಸಿಕೊಂಡು ಇಂದಿಗೂ ಕೃಷಿ ಪರಂಪರೆಯನ್ನು ಉಳಿಸಿಕೊಂಡು ನಾಗರಾಧನೆಯ ಮೂಲಕ ಪ್ರಕೃತಿಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಇದು ಶ್ಲಾಘನೀಯ ವಿಚಾರ. ಈ ವಿಚಾರವನ್ನೊಳಗೊಂಡ ಸಂಶೋಧನಾ ಕೃತಿಯಾದ "ಸಿರಿಮುಡಿ" ಲೋಕಾರ್ಪಣೆಗೊಂಡಿದ್ದು, ಈ ಮೂಲಕ ಇವರ ಮೂಲ ಆಚಾರ - ವಿಚಾರಗಳ ಪಾರಂಪರ್ಯ ಸಮಾಜಕ್ಕೆ ಇನ್ನಷ್ಟು ಗಟ್ಟಿಯಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನ ಉದ್ಯಾವರ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಕೋಮರಾಯ ಚಾಮುಂಡೇಶ್ವರೀ ದೈವಸ್ಥಾನದ ದೈವದ ಪಾತ್ರಿ ಶಂಕರ ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಂಜೇಶ್ವರ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಯಾದವ ಬಡಾಜೆ ಅವರು "ಸಿರಿಮುಡಿ" ಧ್ವನಿ ಸುರುಳಿಯನ್ನ ಬಿಡುಗಡೆಗೊಳಿಸಿದರು.
ಬಾಕುಡ ಸಮಾಜ ಸೇವಾ ಸಮಿತಿ ಕೇರಳ-ಕರ್ನಾಟಕ ಅಧ್ಯಕ್ಷ ಸುಜಾತ ಶಿವ ಬಳ್ಳಿಮೊಗರು ಗೌರವ ಉಪಸ್ಥಿತರಿದ್ದರು. ಸಿರಿಮುಡಿ ಸಂಘಟಕ ಸಮಿತಿ ಅಧ್ಯಕ್ಷ ಹರೀಶ್ ಮಾಸ್ತರ್ ಅಂಗಡಿಪದವು ಸಮಾರಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಗುರುಪುರ ನಾಡ ಕಚೇರಿಯ ಉಪತಹಶೀಲ್ದಾರ್ ಶಿವಪ್ರಸಾದ್, ಮಲಬಾರ್ ದೇವಸ್ವಂ ಬೋರ್ಡ್ ನೀಲೇಶ್ವರದ ಇನ್ಸ್ಪೆಕ್ಟರ್ ಉಮೇಶ್ ಅಟ್ಟೆಗೋಳಿ, ಮಂಜೇಶ್ವರ ವಲಯ ನಲಿಕೆಯವರ ಸಮಾಜ ಸೇವಾ ಸಂಘದ ದೈವರಾಧನ ಸಮಿತಿ ಅಧ್ಯಕ್ಷ ರಾಮ ಖಂಡಿಗೆ, ಅಖಿಲ ಭಾರತ ಮುಂಡಾಳ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಕಾಟಿಪಳ್ಳ, ಬಿಲ್ಲವ ಸಮಾಜದ ಅಧ್ಯಕ್ಷ ನ್ಯಾಯವಾದಿ. ನವೀನ್ ರಾಜ್ ಕೆ.ಜೆ, ಉರ್ವ ಪೋಲೀಸ್ ಠಾಣೆಯ ಎ.ಎಸ್.ಐ ವಿನಯ ಕುಮಾರ್ ಮಂಗಲ್ಪಾಡಿ, ಸಿರಿಮುಡಿ ಸಂಘಟನಾ ಸಮಿತಿಯ ಪಧಾಧಿಕಾರಿಗಳಾದ ರಾಮ ಎಫ್.ಸಿ.ಐ, ಮಂಗಲ್ಪಾಡಿ, ಕೆ. ರಾಮ ಕಿನ್ನಿಗೋಳಿ, ರಘುರಾಮ ಚತ್ರಂಪಳ್ಳ, ರಾಮ ತಲಪಾಡಿ, ಶಿವಾನಂದ ಮಂಗಲ್ಪಾಡಿ, ಸುಮಂಗಳ ಶಿವದಾಸ್ ಪೊಸೋಟ್, ಸಮಾಜದ 18 ದೈವಸ್ಥಾನಗಳ ಪ್ರಮುಖ ಪದ್ಮನಾಭ ಅಂಗಡಿಪದವು, ಬಾಲಕೃಷ್ಣ ವಿ.ಎನ್.ಅಡ್ಕ, ಚಂದ್ರಶೇಖರ ಅಂಗದಿಪದವು, ವಿಜಯ ಮೊರತ್ತಣೆ, ಮಂಜುನಾಥ ಅಡ್ಕ, ಯಾದವ ಬೆಜ್ಜ, ರಾಮ ಮುಳಿಂಜ, ವಸಂತ ಬಾಬುಗುಡ್ಡೆ, ಸೋಮನಾಥ ಅರಿಮಲೆ, ಉಮಾನಾಥ ಕೂಳೂರು, ದಯಾಕರ ಅತ್ತಾವರ, ನವೀನ್ ಬೆದ್ರಡ್ಕ, ಪದ್ಮನಾಭ ನರಿಂಗಾನ, ಸುರೇಶ್ ಹೇರೂರು, ಎ. ಸುರೇಶ್ ಮಂಗಲ್ಪಾಡಿ, ರಮೇಶ್ ಮಂಗಲ್ಪಾಡಿ, ರಾಮ ಕಾರ್ಲೆ, ದಯಾನಂದ, ಅನಿಲ್ ಹೊಸಬೆಟ್ಟು, ಅಚ್ಚುತ್ತ ಹೊಸಂಗಡಿ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಸಂಸನೆಗೈದರು.
ಈ ಸಂದರ್ಭ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಸಮಾಜದ ಪ್ರತಿನಿಧಿಗಳಾದ ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ರಾಘವ ಹೊಸಬೆಟ್ಟು, ಮಧೂರು ಗ್ರಾಮ ಪಂಚಾಯತಿ ಸದಸ್ಯ ಉದಯ ಸಿ.ಎಚ್ ಬೆದ್ರಡ್ಕ, ಕೊಣಾಜೆ ಗ್ರಾಮ ಪಂಚಾಯತಿ ಸದಸ್ಯ ಚಂಚಲಾಕ್ಷಿ ಅಸೈಗೋಳಿ, ರವಿ ಪಟ್ಟೋರಿ, ಮೂಡುಶೆಡ್ಡೆ ಗ್ರಾಮ ಪಂಚಾಯತಿ ಸದಸ್ಯೆ ಕರೀಶ್ಮ, ಎಂಬವರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಫುಷ್ಪ ನೀಡಿ ಸನ್ಮಾನಿಸಲಾಯಿತು. ಈ ವೇಳೆ "ಸಿರಿಮುಡಿ" ಸಂಶೋಧನಾ ಕೃತಿಯ ಕರ್ತೃ ಸುರೇಶ್ ಮಂಗಲ್ಪಾಡಿಯವರನ್ನ ಬಾಕುಡ ಸಮಾಜದ 18 ದೈವಸ್ಥಾನದ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕು. ಭುವನ ಮತ್ತು ಬಳಗದವರು ಪ್ರಾರ್ಥನೆ ಹಾಡಿ, ಸಿರಿಮುಡಿ ಸಂಘಟಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ, ಸಿರಿಮುಡಿ ಕೃತಿ ಲೇಖಕರಾದ ಎ. ಸುರೇಶ್ ಕುಮಾರ್ ಮಂಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಯುವ ಸಂಶೋಧಕರು ಮತ್ತು ಉಪನ್ಯಾಸಕ ಅರುಣ್ ಉಳ್ಳಾಲ ನಿರೂಪಿಸಿ, ಸಿರಿಮುಡಿ ಸಂಘಟಕ ಸಮಿತಿಯ ಪ್ರಧಾನ ಸಂಚಾಲಕ ತುಳಸಿದಾಸ್ ಮಂಜೇಶ್ವರ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ಕಾರ್ಯಕ್ರಮ, ಹಾಗೂ ಅನ್ನ ಸಂತರ್ಪಣೆ ನಡೆಯಿತು.