ಬದಿಯಡ್ಕ: ಸಮಾಜದಲ್ಲಿ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳ ಕತ್ತಲು ಬದುಕಿಗೆ ಬೆಳಕಿಂಡಿಯಾಗಿ ಸಮಾಜ ಸೇವೆ,ಪರಿಸರ ಸಂರಕ್ಷಣೆ ಮುಂತಾದ ಸಮಾಜಮುಖಿ ಕೆಲಸಗಳನ್ನು ಮಾಡುವ ಉದ್ದೇಶದೊಂದಿಗೆ ಸೇವಾಭಾರತಿ ನೀರ್ಚಾಲು ಘಟಕ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಬದಿಯಡ್ಕ ಗ್ರಾಮ ಪಂಚಾಯತಿನ 17ನೇ ವಾರ್ಡು ವಿಷ್ಣುಮೂರ್ತಿ ನಗರ, ಬೇಳ ಪರಿಸರದಲ್ಲಿ ವಾಸಿಸುವ ಮೂವರು ಸಹೋದರಿಯರು ಮಾತ್ರವಿರುವ ಕುಟುಂಬವು ಜೀವನ ನಿರ್ವಹಿಸಲು ಕಷ್ಟಪಡುತ್ತಿರುವುದು ಗಮನಿಸಿ ನೆರವಿಗೆ ದಾನಿಗಳ ಸಹಕಾರ ಕೋರಿದೆ.
ಈ ನಿರ್ಗತಿಕ ಕುಟುಂಬದಲ್ಲಿ ಓರ್ವೆ ಲಕ್ಷ್ಮೀ ಶೆಟ್ಟಿ ಇತ್ತೀಚೆಗೆ ಅಕಸ್ಮಿಕವಾಗಿ ಪಕ್ಷವಾತ ಬಾಧಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮನೆಯಲ್ಲಿ ಮಾತೆಯರು ಮಾತ್ರವಿದ್ದು ಜೀವನ ನಿರ್ವಹಣೆಗೆ ದಿನನಿತ್ಯ ಬೀಡಿ ಕಟ್ಟುತ್ತಿದ್ದಾರೆ. ಇದರೊಂದಿಗೆ ಸಹೋದರಿಯರಿಗೆ ಅನಾರೋಗ್ಯವೂ ಬಂದೆರಗಿ ಪರರ ಸಹಾಯದಿಂದ ಚಿಕಿತ್ಸೆಯಲ್ಲಿದ್ದಾರೆ. ಈಗಾಗಲೇ ವಾರ್ಡು ಸದಸ್ಯೆ ಸ್ವಪ್ನಾ ಅವರು ಕೈಲಾದ ನೆರವು ನೀಡಿದ್ದು ಈ ಕುಟುಂಬಕ್ಕೆ ಉದಾರ ದಾನಿಗಳ ಇನ್ನಷ್ಟು ಸಹಾಯಹಸ್ತವು ಅತೀ ಅಗತ್ಯವಿದೆ. ಹೃದಯ ವಿಶಾಲ ಮಾನವ ಸ್ನೇಹಿಗಳು ಕತ್ತಲಲ್ಲಿರುವ ಕುಟುಂಬಕ್ಕೆ ಸೇವಾ ಭಾರತಿಯ ಮೂಲಕ ಬೆಳಕನ್ನು ಹಂಚಲು ಕೈಜೋಡಿಸಬೇಕಾಗಿ ವಿನಂತಿಸಲಾಗಿದೆ.
ಸೇವಾಭಾರತಿ ನೀರ್ಚಾಲು ಘಟಕಕ್ಕೆ ಸಹಾಯ ನೀಡಲು ಬಯಸುವ ಮಹನೀಯರು ಆನ್ ಲೈನ್ ಪಾವತಿಗೆ ಈ ಕೆಳಗಿನ ಬ್ಯಾಂಕ್ ಖಾತೆಗೆ ನೆರವು ನೀಡಬಹುದು.
Account No : 68730100009414