ಪೆರ್ಲ: ಖ್ಯಾತ ತುಳು ಸಾಹಿತಿ ರಾಜಶ್ರೀ ಟಿ ರೈ ಪೆರ್ಲ ಇವರ ತುಳು ಕವನ ಸಂಕಲನ ಮಮಿನದೊ ವನ್ನು ಧರ್ಮಸ್ಥಳದಲ್ಲಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆ ಮಾಡಿದರು. ಧಾರ್ಮಿಕ ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು,ಖ್ಯಾತ ದಾಸ ಸಂಕೀರ್ತನಕಾರ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಲೇಖಕಿ ರಾಜಶ್ರೀ ಟಿ ರೈ ಪೆರ್ಲ , ತಾರಾನಾಥ ರೈ ಪಡ್ಡಂಬೈಲು ಗುತ್ತು, ಮತ್ತು ಕುಮಾರಿ ಸನ್ನಿಧಿ ಪೆರ್ಲ, ಮಾಸ್ಟರ್ ಧ್ರುವ ಕಾರ್ತಿಕೇಯ ಉಪಸ್ಥಿತರಿದ್ದರು.
ಈ ಕೃತಿಯನ್ನು ಆಕೃತಿ ಆಶಯ ಪ್ರಕಾಶನದ ಮೂಲಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು ಮತ್ತು ತುಳು ಸಾಹಿತ್ಯ, ಸಾಮಾಜಿಕ ,ಸಾಂಸ್ಕøತಿಕ ನೇತಾರ ಸರ್ವೋತ್ತಮ ಶೆಟ್ಟಿ ದುಬೈ ಇವರು ಬೆಳಕಿಗೆ ತಂದಿದ್ದಾರೆ. ಅಮೃತ ಸೋಮೇಶ್ವರರ ಶುಭ ನುಡಿ ,ನವನೀತ ಶೆಟ್ಟಿ ಕದ್ರಿಯವರ ಮುನ್ನುಡಿ ಮತ್ತು ಮುಂಬೈ ವಿಶ್ವವಿದ್ಯಾನಿಲಯದ ಪೂರ್ಣಿಮಾ ಸುಧಾಕರ್ ಶೆಟ್ಟಿಯವರ ಬೆನ್ನುಡಿಯಿದೆ. ತುಳು ಕನ್ನಡದ ಕಥೆಗಾರ್ತಿಯಾಗಿ ಗುರುತಿಸಿಕೊಂಡಿರುವ ರಾಜಶ್ರೀ ಟಿ.ರೈ ಪೆರ್ಲ ಅವರ ಕಾದಂಬರಿಗಳು ಈಗಾಗಲೇ ಕರ್ನಾಟಕದ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಗೌರವ, ಪಣಿಯಾಡಿ ಪ್ರಶಸ್ತಿಗೆ ಪಾತ್ರವಾಗಿವೆ. ನಾಟಕ ಹಸ್ತಪ್ರತಿಗಾಗಿ ರತ್ನವರ್ಮ ಹೆಗ್ಗಡೆ ನಾಟಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.