ತಿರುವನಂತಪುರ: ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ನಡೆಯಲಿರುವ ರಾಜ್ಯ ಲೋಕಸೇವಾ ಆಯೋಗ(ಪಿಎಸ್‍ಸಿ)ಯ ಸಾಮಾನ್ಯ ಪ್ರಾಥಮಿಕ ಪರೀಕ್ಷೆಯ ಪ್ರವೇಶ ಟಿಕೆಟ್‍ಗಳನ್ನು ಪೆÇ್ರಫೈಲ್‍ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಆಯೋಗ ಸೂಚನೆ ನೀಡಿದೆ. ಹತ್ತನೇ ತರಗತಿಯ ಮೂಲ ಅರ್ಹತಾ ಪರೀಕ್ಷೆಯ ಪ್ರವೇಶ ಟಿಕೆಟ್ ಪ್ರಕಟಿಸಲಾಗಿದೆ.
ಫೆಬ್ರವರಿ 10 ರಿಂದ ಪ್ರವೇಶ ಟಿಕೆಟ್ ಡೌನ್‍ಲೋಡ್ ಮಾಡಲು ಲಭ್ಯವಿರುತ್ತದೆ ಎಂದು ಪಿಎಸ್‍ಸಿ ಈ ಹಿಂದೆ ತಿಳಿಸಿತ್ತು. ಸಾಮಾನ್ಯ ಪ್ರಾಥಮಿಕ ಪರೀಕ್ಷೆ ಫೆಬ್ರವರಿ 20, 25 ಮತ್ತು ಮಾರ್ಚ್ 6 ಮತ್ತು 13 ರಂದು ನಡೆಯಲಿದೆ. 18 ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಸಾಮಾನ್ಯ ಪ್ರಾಥಮಿಕ ಪರೀಕ್ಷೆಗೆ ಹಾಜರಾಗಲು ತಯಾರಿ ನಡೆಸುತ್ತಿದ್ದಾರೆ. ಪರೀಕ್ಷೆಯ ಪಠ್ಯಕ್ರಮವನ್ನು ಈ ಮೊದಲು ಪ್ರಕಟಿಸಲಾಗಿತ್ತು.
ನಾಲ್ಕು ಹಂತದ ಸಾಮಾನ್ಯ ಪರೀಕ್ಷೆಯ ಮೊದಲ ಹಂತ ಫೆಬ್ರವರಿ 20 ರಂದು ನಡೆಯಲಿದೆ. 2020 ರಲ್ಲಿ ಜಾಹೀರಾತು ನೀಡಲಾದ ಹತ್ತನೇ ತರಗತಿಯ ಅರ್ಹ ಹುದ್ದೆಗಳನ್ನು ಈ ಸಾಮಾನ್ಯ ಪ್ರಾಥಮಿಕ ಪರೀಕ್ಷೆಯಲ್ಲಿ ಸೇರಿಸಲಾಗಿದೆ. ದೃಢೀಕರಣವನ್ನು ಸರಿಯಾಗಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ಪ್ರವೇಶ ಟಿಕೆಟ್ ಪಡೆಯುತ್ತಾರೆ.