ಕಾಸರಗೋಡು:ರಾಜ್ಯ ಮೀನುಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಸೊಸೈಟಿ ಫಾರ್ ಅಸಿಸ್ಟೆನ್ಸ್ ಟು ಫಿಷರ್ ವಿಮೆನ್ ('ಸಾಫ್') ಕರಾವಳಿ ಮೈತ್ರಿ ಸೀ ಫುಡ್ ರೆಸ್ಟಾರೆಂಟ್ ಯೋಜನೆಗೆ ಜಿಲ್ಲೆಯ ಕರಾವಳಿ ಪಂಚಾಯಿತಿಗಳ ಮೀನುಗಾರ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ತಲಾ 5 ಮಂದಿ ಮಹಿಳೆಯರಿರುವ ಗುಂಪುಗಳನ್ನು ಯೋಜನೆಗಾಗಿ ಪರಿಶೀಲಿಸಲಾಗುವುದು.
ಮೀನುಗಾರಿಕಾ ಇಲಾಖೆ ಸಿದ್ಧಪಡಿಸಿರುವ ಫಿಂಸ್ ನಲ್ಲಿ ಸದಸ್ಯೆಯರಾಗಿರುವ 20ರಿಂದ 50 ವರ್ಷ ಪ್ರಾಯದ ನಡುವಿನವಯೋಮಾನದ ಮೀನುಗಾರ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಾಗಿರುವರು. ಗುಂಪೆÇಂದಕ್ಕೆ ರೆಸ್ಟಾರೆಂಟ್ ಆರಂಭಕ್ಕೆ ಗರಿಷ್ಠ 5 ಲಕ್ಷ ರೂ. ಮಂಜೂರು ಮಾಡಲಾಗುವುದು. ಅರ್ಜಿ ಫಾರಂ ಆಯಾ ಜಿಲ್ಲೆಗಳ ಫಿಷರೀಸ್ ಡೆಪ್ಯೂಟಿ ಡೈರೆಕ್ಟರ್ ಅವರ ಕಚೇರಿಯಲ್ಲಿ ಲಭ್ಯವಿದೆ. ಮಾ.1ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9645259674, 7306662170 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.