ಮಂಜೇಶ್ವರ: ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತದ ವಿರುದ್ದ ಗಡಿ ನಾದ ಜನತೆಯ ಪ್ರತಿಭಟನೆ ತಾರಕ್ಕೇರುತ್ತಿದೆ. ಸೋಮವಾರ ಪ್ರತಿಭಟನೆ ಹಾಗೂ ಕರ್ನಾಟಕ ಹೈಕೋರ್ಟಿಗೆ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿಯ ಅರ್ಜಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತೆರಡು ದಿನವನ್ನು ಸಡಿಲಿಕೆಯನ್ನು ನೀಡಿರುವುದು ಗಡಿನಾಡ ಜನತೆಯಲ್ಲಿ ಅಲ್ಪ ಸಂತೋಷವನ್ನು ನೀಡಿರುವುದಾದರೂ ಮತ್ತೆ ಬುಧವಾರದಿಂದ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಿರುವುದಾಗಿ ಮಂಗಳೂರು ಜಿಲ್ಲಾಧಿಕಾರಿ ಹೇಳಿಕೆಯನ್ನು ನೀಡಿರುವುದು ಗಡಿನಾಡ ಜನತೆಯನ್ನು ಮತ್ತಷ್ಟು ಕಂಗಾಲುಗೊಳಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿನಾಡ ಜನತೆಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಮಂಗಳವಾರ ಎಡರಂಗದ ಯುವ ಸಂಘಟನೆಯಾದ ಎಲ್ ಡಿ ವೈ ಎಫ್ ನ ನೇತೃತ್ವದಲ್ಲಿ ಗಡಿ ಪ್ರದೇಶಕ್ಕೆ ಪ್ರತಿಭಟನಾ ಜಾಥಾ ಹಾಗೂ ಧರಣಿಯನ್ನು ಹಮ್ಮಿಕೊಳ್ಳಲಾಯಿತು. ತಲಪಾಡಿ ಗಡಿಯಿಂದ ಆರಂಭಗೊಂಡ ಪ್ರತಿಭಟನಾ ಜಾಥಾವನ್ನು ಟೋಲ್ ಗೆಟ್ ಪರಿಸರದಲ್ಲಿ ಕರ್ನಾಟಕ ಪೋಲೀಸರು ತಡೆದರು.
ಬಳಿಕ ಅಜಿತ್ ಎಂ ಸಿ ಯವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಎ ಐ ವೈ ಎಫ್ ಕಾರ್ಯದರ್ಶಿ ಮಹೇಶ್ ಕಕ್ಕತ್ ಉದ್ಘಾಟಿಸಿದರು.
ನೇತಾರರಾದ ಕೆ ಆರ್ ಜಯಾನಂದ , ಮೊಹಮ್ಮದ್ ಅಶ್ರಫ್ ಮೊದಲಾದವರು ಮಾತನಾಡಿದರು. ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟಲು ಬೇಕಾದ ಎಲ್ಲಾ ಮುಂಜಾಗ್ರತೆ ಪಾಲಿಸಲಾಗುತ್ತಿದೆ . ಆದರೆ ಕರ್ನಾಟಕದಲ್ಲಿ ಕೊರೋನಾವನ್ನು ತಡೆಯುವ ಪೆÇಲೀಸರೇ ಮಾಸ್ಕ್ ಇಲ್ಲದೆ ಕತ್ರ್ಯವ್ಯವನ್ನು ನಿಭಾಯಿಸುತ್ತಿದ್ದಾರೆ. ನಿಯಂತ್ರಣವಿಲ್ಲದೆ ಕರ್ನಾಟಕದ ಜನತೆಯನ್ನು ನಿಯಂತ್ರಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಡಿನಾಡ ಜನತೆಯನ್ನು ಟಾರ್ಗೆಟ್ ಮಾಡಿರುವುದು ಖೇದಕರ. ದಕ್ಷಿಣ ಕನ್ನಡ ಜಿಲ್ಲಾಡಳಿತ ರಾಜಕೀಯ ದುರುಪಯೋಗಪಡಿಸಿಕೊಂಡು ಕೇರಳದಿಂದ ಕರ್ನಾಟಕಕ್ಕೆ ಬರುವವರನ್ನು ಕೋವಿಡ್ ಹೆಸರಲ್ಲಿ ತಡೆದರೆ ಕರ್ನಾಟಕ ಭಾಗದಿಂದ ಯಾವುದೇ ವಾಹನವನ್ನು ಕೇರಳಕ್ಕೆ ಬರಲು ಬಿಡದೆ ಗಡಿಯಲ್ಲೇ ತಡೆಯೊಡ್ಡುವುದಾಗಿ ನೇತಾರರು ಮುನ್ನೆಚ್ಚರಿಕೆ ನೀಡಿದರು .
ನೇತಾರರಾದ ಪ್ರಶಾಂತ್ ಕನಿಲ , ಮುನೀರ್ ತೂಮಿನಾಡು , ಆಶ್ರಫ್ ಕುಂಜತ್ತೂರು, ಮುಸ್ತಫಾ ಕಡಂಬಾರ್, ದಯಾಕರ ಮಾಡ , ಸಂಕೇತ್ ಕುತ್ತಾರ್ ಮೊದಲಾದವರು ನೇತೃತ್ವ ನೀಡಿದರು.