ಬದಿಯಡ್ಕ: ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ವರ್ಷಾವಧಿ ಉತ್ಸವವು ಫೆ. 17 ರಾತ್ರಿ ಧ್ವಜಾರೋಹಣಗೊಂಡು ಫೆ.22 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಫೆ. 17 ರಂದು ಬುಧವಾರ ರಾತ್ರಿ 8. ಕ್ಕೆ ಗಣಪತಿ ಪೂಜೆ, ಧ್ವಜಾರೋಹಣ ನಡೆಯಲಿದೆ. ಸಂಜೆ 7.:30 ರಿಂದ ಶ್ರೀದುರ್ಗಾ ಭಜನ ಸಂಘ ಅಗಲ್ಪಾಡಿ ಹಾಗೂ ರಾತ್ರಿ 8.30 ರಿಂದ ಶ್ರೀ ಧರ್ಮಶಾಸ್ತಾ ಭಜನ ಸಂಘ ಉಬ್ರಂಗಳ ತಂಡದಿಂದ ಭಜನಾ ಸೇವೆ ನಡೆಯಲಿದೆ. ರಾತ್ರಿ ಧ್ವಜಾರೋಹಣದ ಬಳಿಕ ಮಹಾಪೂಜೆ, ಶ್ರೀ ಭೂತಬಲಿ, ನೃತ್ತ ಸೇವೆ ನಡೆಯಲಿದೆ. ಫೆ. 18 ರಂದು ಬೆಳಗ್ಗೆ 7.30 ಕ್ಕೆ ಉಷಃ ಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 12.30 ಮಹಾಪೂಜೆ, ಸಂತರ್ಪಣೆ, 5.30 ರಿಂದ ಶ್ರೀಭಗವತೀ ಭಜನ ಸಂಘ ಪೊಡಿಪಳ್ಳ ತಂಡದಿಂದ ಭಜನೆ, ರಾತ್ರಿ 8.ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ನೃತ್ತ ನಡೆಯಲಿದೆ. 19 ರಂದು ಬೆಳಗ್ಗೆ 7.30 ಕ್ಕೆ ಉಷಃ ಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಸಂತರ್ಪಣೆ, 5.30ರಿಂದ ಶ್ರೀ ಗೋಪಾಲಕೃಷ್ಣ ಭಜನ ಸಂಘ ಅಗಲ್ಪಾಡಿ ತಂಡದಿಂದ ಭಜನೆ, ರಾತ್ರಿ 8. ರಿಂದ ಮಹಾಪೂಜೆ, ಶ್ರೀ ಭೂತಬಲಿ, ನೃತ್ತ ನಡೆಯಲಿದೆ.
ಫೆ.20 ರಂದು ಬೆಳಗ್ಗೆ 7.30 ಕ್ಕೆ ಉಷಃ ಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಸಂತರ್ಪಣೆ, 5.30 ರಿಂದ ಶ್ರೀ ಅಯ್ಯಪ್ಪ ಭಜನ ಸಂಘ ಮಾವಿನಕಟ್ಟೆ ತಂಡದಿಂದ ಭಜನೆ, ರಾತ್ರಿ 8.ಕ್ಕೆ ನಡುದೀಪೋತ್ಸವ, ಮಹಾಪೂಜೆ, ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ರಥೋತ್ಸವ, ನೃತ್ತ ನಡೆಯಲಿದೆ.
21 ರಂದು ಬೆಳಗ್ಗೆ 7.30 ಕ್ಕೆ ಉಷಃ ಪೂಜೆ, ಶ್ರೀ ಭೂತಬಲಿ, ಮಧ್ಯಾಹ್ನ 11.30 ಕ್ಕೆ ಶ್ರೀ ಜಟಾಧಾರೀ ದೈವದ ಭಂಡಾರ ರಾಜಾಂಗಣಕ್ಕೆ ಆಗಮನ, ಸ್ವೀಕಾರ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಸಂತರ್ಪಣೆ, 5.30ಕ್ಕೆ ಶ್ರೀಮಹಮ್ಮಾಯಿ ಭಜನ ಸಂಘ ಮಾರ್ಪನಡ್ಕ ತಂಡದಿಂದ ಭಜನೆ, ರಾತ್ರಿ 8. ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿಶ್ರೀ ದೇವರಿಗೆ ಮಹಾಪೂಜೆ, ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕಿ ಉತ್ಸವ, ರಥೋತ್ಸವ ನಡೆಯಲಿದೆ.
22 ರಂದು ಬೆಳಗ್ಗೆ 7.30ಕ್ಕೆ ಕವಾಟೋದ್ಘಾಟನೆ, ಉಷಃ ಪೂಜೆ, 10ಕ್ಕೆ ಶ್ರೀ ಭೂತಬಲಿ, ಅವಭೃಥ ನೃತ್ತ, ಧ್ವಜಾವರೋಹಣ, ಬಟ್ಳು ಕಾಣಿಕೆ, ಮಂತ್ರಾಕ್ಷತೆ,ಮಹಾಪೂಜೆ, ಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಶ್ರೀಧರ್ಮಶಾಸ್ತಾ ಭಜನ ಸಂಘ ಕುರುಮುಜ್ಜಿಕಟ್ಟೆ ತಂಡದಿಂದ ಭಜನೆ, ರಾತ್ರಿ 8. ಕ್ಕೆ ಮಹಾಪೂಜೆ, ರಾತ್ರಿ 2.:30 ರಿಂದ ಶ್ರೀ ಜಟಾಧಾರೀ ದೈವದ ಮಹಿಮೆ, ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.