ಕಾಸರಗೋಡು: ರಾಜ್ಯದ ವಿವಿಧ ಹಾಸ್ಟೆಲ್ ಗಳಲ್ಲಿ ಆಹಾರ ಮತ್ತು ಕುಡಿಯುವ ನೀರು ಸುರಕ್ಷೆ ಸಂಬಂಧ ದೂರುಗಳು ಲಭಿಸಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಯುವಜನ ಆಯೋಗವು ಆಹಾರ ಸುರಕ್ಷೆ ಕಮೀಷನರ್ ಗೆ ಆದೇಶ ನೀಡಿದೆ. ಜೊತೆಗೆ ಹಾಸ್ಟೆಲ್ ಗಳಲ್ಲಿ ಶುಚಿತ್ವ ಸಂಹಿತೆಗಳನ್ನು ಜಾರಿಗೊಳಿಸಲು, "ಆಪರೇಷನ್ ಫಿಶ್" ಯೋಜನೆ ಜಾರಿಗೊಳಿಸಲೂ, ಈ ಸಂಬಂಧ ತಪಾಸಣೆಗೆ ದಳಗಳನ್ನು ರಚಿಸಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಬುಧವಾರ ಕಾಸರಗೋಡು ಸರಕಾರಿ ಅತಿಥಿ ಮಂದಿರದಲ್ಲಿ ಜರುಗಿದ ಯುವಜನ ಆಯೋಗದ ಅಹವಾಲು ಸ್ವೀಕಾರ ಸಭೆಯಲ್ಲಿ ಆಯೋಗ ಸದಸ್ಯೆ ಕೆ.ಪಿ.ಷಜೀರಾ ಈ ವಿಚಾರ ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲೂ ಈ ಸಂಬಂಧ ತಪಾಸಣೆ ನಡೆದುಬರುತ್ತಿದೆ. ನೋಂದಣಿ ಹೊಂದದೇ ಇರುವ ಹಾಸ್ಟೆಲ್ ಗಳು ತಕ್ಷಣ ನೋಂದಣಿ ನಡೆಸಬೇಕು. 6 ತಿಂಗಳಿಗೊಮ್ಮೆ ನೀರಿನ ಗುಣಮಟ್ಟ ತಪಾಸಣೆ ನಡೆಸಿ, ಸರ್ಟಿಫಿಕೆಟ್ ಇರಿಸಿಕೊಳ್ಳುವಂತೆ ಹಾಸ್ಟೆಲ್ ಗಳಿಗೆ ಆದೇಶ ನೀಡಲು ಆಹಾರ ಇಲಾಖೆ ತಿಳಿಸಿದೆ ಎಂದವರು ನುಡಿದರು.
ಬುಧವಾರ ನಡೆದ ಅಹವಾಲು ಸ್ವೀಕಾರ ಸಬೆಯಲ್ಲಿ 18 ದೂರುಗಳ ಪರಿಶೀಲನೆ ನಡೆಯಿತು. 12 ದೂರುಗಳಿಗೆ ತೀರ್ಪು ನೀಡಲಾಗಿದೆ. ಉಳಿದ 6 ದೂರುಗಳ ಪರಿಶೀಲನೆಯನ್ನು ಮುಂದಿನ ಸಭೆಯಲ್ಲಿ ನಡೆಸುವುದಾಗಿ ತಿಳಿಸಲಾಗಿದೆ.
ಸದಸ್ಯೆ ರೆನೀಷಾ ಮ್ಯಾಥ್ಯೂ, ಆಡಳಿತಾಧಿಕಾರಿ ಟಿ.ಎಸ್.ಸಬಿ, ಸಹಾಯಕಿ ರಮ್ಯಾ ಎಸ್.ಆರ್. ಉಪಸ್ಥಿತರಿದ್ದರು.