ತಿರುವನಂತಪುರ: ನಾಡರ್ ಸಮುದಾಯವನ್ನು ಒಬಿಸಿ ವಿಭಾಗದಲ್ಲಿ ಸೇರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯಲ್ಲಿ ಹೊಸ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಡ ಸರ್ಕಾರದ ಪರವಾಗಿ ನಾಡರ್ ಮತಗಳನ್ನು ಪಡೆಯುವುದು ರಾಜ್ಯ ಸರ್ಕಾರದ ಇತ್ತೀಚಿನ ಲಕ್ಷ್ಯವೆನ್ನಲಾಗಿದೆ.
ಈ ಹಿಂದೆ ಮೀಸಲಾತಿ ಹಿಂದೂ ನಾಡರ್ ಮತ್ತು ಎಸ್.ಐ.ಸಿ.ಯು ಸದಸ್ಯರಿಗೆ ಮಾತ್ರ ಇತ್ತು. ಹೊಸ ನಿರ್ಧಾರದಂತೆ ಕ್ರಿಶ್ಚಿಯನ್ ಚರ್ಚುಗಳಲ್ಲಿನ ವಿವಿಧ ಪಂಗಡಗಳಿಗೆ ಸೇರಿದ ಎಲ್ಲಾ ನಾಡಾರ್ ಗಳಿಗೆ ಒಬಿಸಿ ಮೀಸಲಾತಿ ಲಭ್ಯವಿರುತ್ತದೆ.
ತಿರುವನಂತಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಾಡರ್ ಸಮುದಾಯ ಪ್ರಧಾನವಾಗಿದೆ. ನಾಡರ್ ಸಮುದಾಯವನ್ನು ಒಬಿಸಿ ಪಟ್ಟಿಯಲ್ಲಿ ಪೂರ್ಣವಾಗಿ ಸೇರಿಸಲು ಮತ್ತು ಮೀಸಲಾತಿ ನೀಡುವ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಆದರೆ ವಿಧಾನಸಭಾ ಚುನಾವಣೆಗೆ ಮುನ್ನ ತೆಗೆದುಕೊಂಡ ನಿರ್ಧಾರವು ನಾಡರ್ ಮತಗಳನ್ನು ಗುರಿಯಾಗಿಸಿಕೊಂಡು ಟೀಕೆಗೆ ಗುರಿಯಾಗಿದೆ.