ತ್ರಿಶೂರ್: ವಿಶ್ವ ಪ್ರಸಿದ್ದ ತ್ರಿಶೂರ್ ಪೂರಂ ನಡೆಸಲು ಸರ್ಕಾರ ಕೊನೆಗೂ ಸಮ್ಮತಿಸಿದೆ. ಸಚಿವ ವಿ.ಎಸ್.ಸುನೀಲ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಿಬಂಧನೆಗಳೊಂದಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಪೂರಂ ನಡವಳಿಕೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ದೇವಸ್ವಂ ಪದಾಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ಸಮಿತಿಯನ್ನು ರಚಿಸಲಾಯಿತು.
ಎಲ್ಲಾ ಸಮಾರಂಭಗಳೊಂದಿಗೆ ಪೂರಂ ನಡೆಸಲು ನಿರ್ಧರಿಸಲಾಗಿದೆ. ಪೂರ್ವ ಪ್ರದರ್ಶನಗಳೂ ಇರಲಿವೆ. ಆದರೆ ಕೋವಿಡ್ ವಿಕೋಪದಲ್ಲಿದ್ದರೆ ಆ ಸಂದರ್ಭಕ್ಕನುಸರಿಸಿ ಬದಲಾವಣೆಗಳಿರಲಿವೆ. ಮುಂದಿನ ತಿಂಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
ಕೋವಿಡ್ ರೋಗದ ಹರಡುವಿಕೆಯನ್ನು ಪರಿಗಣಿಸಿ, ಕಳೆದ ಬಾರಿ ತ್ರಿಶೂರ್ ಪೂರಂ ಸಾಂಕೇತಿಕ ಸಮಾರಂಭಗಳೊಂದಿಗೆ ಮಾತ್ರ ನಡೆಯಿತು. ಪೂರಂ ಅನ್ನು ಕನಿಷ್ಠ ಒಂದು ಕಡೆ ನಡೆಸಲು ದೇವಸ್ವಂ ಅನುಮತಿ ಕೇಳಿದರೂ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು.