ಕುಂಬಳೆ: ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ, ರಾಷ್ಟ್ರೀಯ ಸುಂಟರಗಾಳಿ ಸಾಧ್ಯತೆ ಲಘೂಕರಣ ಯೋಜನೆ ಅಂಗವಾಗಿ ಕುಂಬಳೆ ಮತ್ತು ಕೂಡ್ಲು ಪ್ರದೇಶಗಳ ದುರಂತ ನಿವಾರಣೆ ಅಭಯ ಕೇಂದ್ರಗಳ ಉದ್ಘಾಟನೆ ಮಂಗಳವಾರ ಜರುಗಿತು.
ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆನ್ ಲೈನ್ ಮೂಲಕ ಮುಖ್ಯ ಅತಿಥಿಯಾಗಿದ್ದರು. ರಾಜ್ಯ ದುರಂತ ನಿವಾರಣೆ ಪ್ರಾಧಿಕಾರ ಕಮೀಷನರ್ ಡಾ.ಎ.ಕೌಶಲ್ ವರದಿ ವಾಚಿಸಿದರು.
ಕೂಡ್ಲಿನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಿ.ಎ.ಸೈಮಾ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನ್ಯಾಯವಾದಿ ಝಮೀರಾ ಫೈಝಲ್, ವಾರ್ಡ್ ಸದಸ್ಯ ಸಿ.ಎಂ.ಬಶೀರ್, ಎ.ಡಿ.ಎಂ. ಅತುಲ್ ಸ್ವಾಮಿನಾಥ್ ಉಪಸ್ಥಿತರಿದ್ದರು.
ಕುಂಬಳೆಯಲ್ಲಿ ನಡೆದ ಸಮಾರಮಭದಲ್ಲಿ ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ.ಸೈಮಾ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ವಾರ್ಡ್ ಸದಸ್ಯ ಪ್ರೇಮಾವತಿ, ಎ.ಡಿ.ಎಂ. ಅತುಲ್ ಸ್ವಾಮಿನಾಥ್ ಉಪಸ್ಥಿತರಿದ್ದರು.