ವಯನಾಡ್: ಕುತೂಹಲದಿಂದ ತುಂಬಿದ ಮಿಲ್ಮಾ ಲಾಂಛನ ರೀತಿಯ ಚಿಹ್ನೆಯೊಂದಿಗೆ ವಯನಾಡಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕಯಕುನ್ನು ಡೈರಿಯ ಜೋಸೆಫ್ ಥಾಮಸ್ ಅವರ ಹಸು ಇತ್ತೀಚೆಗೆ ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಕರುವಿನ ಹಣೆಯ ಮೇಲೆ ಮಿಲ್ಮಾ ಚಿಹ್ನೆ ಇರುವುದು ವಿಶೇಷತೆಯಾಗಿದೆ.ಈ ಕಾರಣದಿಂದ ಮಾಲಕ ಜೋಸೆಫ್ ಕರುವಿಗೆ "ಮಿಲ್ಮಾ" ಎಂದೇ ಹೆಸರಿರಿಸಿ ಮತ್ತಷ್ಟು ವಿಶೇಷವೆನಿಸಿದರು.
ಕರು ಜನಿಸಿದ ಎರಡು ದಿನಗಳ ನಂತರವೇ ಈ ವೈಶಿಷ್ಟ್ಯವು ಮಾಲೀಕರ ಗಮನಕ್ಕೆ ಬಂದಿತು. ಈ ಬಗ್ಗೆ ಮಲಬಾರ್ ಮಿಲ್ಮಾ ತನ್ನ ಅಧಿಕೃತ ಫೇಸ್‍ಬುಕ್ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿದ್ದು ಬಳಿಕ ಹೊರಜಗತ್ತಲ್ಲಿ ಭಾರೀ ವೈರಲ್ ಆಯಿತು. 'ಮಿಲ್ಮಾ ಯಾವಾಗಲೂ ನನ್ನೊಂದಿದೆ' ಎಂಬ ಶೀರ್ಷಿಕೆಯೊಂದಿಗೆ ಮಲಬಾರ್ ಮಿಲ್ಮಾ ಫೇಸ್‍ಬುಕ್‍ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಹೈನುಗಾರಿಕೆ ನಡೆಸುತ್ತಿರುವ ತನ್ನ ಕರುವಿನ ಹಣೆಯ ಮೇಲೆ ಮಿಲ್ಮಾ ಲಾಂಛನ ಮೂಡಿರುವುದು ಕುಟುಂಬ ಮತ್ತು ಸ್ಥಳೀಯರನ್ನು ಆಶ್ಚರ್ಯಗೊಳಿಸಿದೆ. ಇದೀಗ ಕರು ಆಕರ್ಷಣೆಯ ಕೇಂದ್ರವಾಗಿದ್ದು, ವಿವಿಧ ಸ್ಥಳಗಳಿಂದ ಅನೇಕ ಜನರು ಮಿಲ್ಮಾಳನ್ನು ನೋಡಲು ಆಗಮಿಸುತ್ತಿದ್ದಾರೆ ಎಂದು ಜೋಸೆಫ್ ತಿಳಿಸಿದ್ದಾರೆ.