HEALTH TIPS

ಪುದುಚೇರಿಯಲ್ಲಿ ಕಾಂಗ್ರೆಸ್‍- ಡಿಎಂಕೆ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಸೋಲು: ಮುಖ್ಯಮಂತ್ರಿ ರಾಜೀನಾಮೆ

          ಪಾಂಡಿಚೇರಿ: ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್-ಡಿಎಂಕೆ ಸರ್ಕಾರ ವಿಶ್ವಾಸಮತವನ್ನು ಕಳೆದುಕೊಂಡ ನಂತರ ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಸೋಮವಾರ ರಾಜೀನಾಮೆ ನೀಡಿದ್ದಾರೆ.

       ಸದನದಲ್ಲಿ ವಿಶ್ವಾಸಮತ ಕಳೆದುಕೊಂಡ ನಂತರ ನಾರಾಯಣಸ್ವಾಮಿ, ಲೆಫ್ಟಿನೆಂಟ್ ಗವರ್ನರ್ ತಮಿಳ್ ಸೈ ಸೌಂದರರಾಜನ್ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದೊಂದಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ಮುಂದಿನ ಮೂರು ತಿಂಗಳ ಅವಧಿಗೆ ಸರ್ಕಾರ ರಚಿಸಲು ಪ್ರತಿಪಕ್ಷಗಳನ್ನು ಆಹ್ವಾನಿಸಬೇಕೇ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆ ಎಂಬುದನ್ನು ಇದೀಗ ಲೆಫ್ಟಿನೆಂಟ್ ಗವರ್ನರ್ ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿ ಜೂನ್ 8 ಕ್ಕೆ ಕೊನೆಗೊಳ್ಳಬೇಕಿತ್ತು.

               ಕಿರಣ್ ಬೇಡಿ ವಿರುದ್ಧ ನಾರಾಯಣ ಸ್ವಾಮಿ ವಾಗ್ದಾಳಿ:

        ಇದೇ ವೇಳೆ ಅವರು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಆಡಳಿತಾತ್ಮಕ ವಿಷಯಗಳಲ್ಲಿ ಸರ್ಕಾರದೊಂದಿಗೆ ಬೇಡಿ ನಿರಂತರವಾಗಿ ಸಂಘರ್ಷಕ್ಕಿಳಿದರು. ಇದರ ಹೊರತಾಗಿಯೂ ಸರ್ಕಾರ ಕೋವಿಡ್ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆ.  ಆದಾಯ ಉತ್ಪಾದನೆ ಸೇರಿದಂತೆ ಹಲವು ವಿಷಯಗಳಲ್ಲಿ ಬೇಡಿ ಅವರು ಸರ್ಕಾರದ ವಿರುದ್ಧ "ಸಂಚು ನಡೆಸಿದ್ದಾರೆ" ಎಂದು ಸಿಎಂ ಆರೋಪಿಸಿದ್ದಾರೆ. 

             'ಜನರಿಂದ ತಿರಸ್ಕಾರಕ್ಕೊಳಗಾದವರು ನಮ್ಮ ಸರ್ಕಾರವನ್ನು ಉರುಳಿಸಲು ಸಂಚು ನಡೆಸಿದ್ದಾರೆ.  ಬಿಜೆಪಿ ಹಣ ಬಲದಿಂದ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ. ಜತೆಗೆ, ಇ.ಡಿ. ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಂಡು ಶಾಸಕರು ಮತ್ತು ಸಚಿವರಿಗೆ ಬೆದರಿಕೆ ಹಾಕುತ್ತಿದೆ.

                          ಸ್ಪೀಕರ್ ರೂಲಿಂಗ್ ಸರಿಯಲ್ಲ: ನಾರಾಯಣಸ್ವಾಮಿ

           ಸ್ಪೀಕರ್ ತೀರ್ಪು ತಪ್ಪಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ, ಎಐಎಡಿಎಂಕೆ ಪಕ್ಷಗಳು ಮೂವರು ನಾಮನಿರ್ದೇಶಿತ ಸದಸ್ಯರನ್ನು ಬಳಸಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಪುದುಚೇರಿ ಮತ್ತು ಈ ದೇಶದ ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries