HEALTH TIPS

ತುಳುವಲ್ಲಿ ಸಂವಹನ ಮಾಡಿ: ಒಡಿಯೂರು ಶ್ರೀ

           ವಿಟ್ಲ: ಸಾಹಿತ್ಯ ಶ್ರೇಷ್ಠವಾದುದು. ವೇದ, ಉಪನಿಷತ್ತು, ಪುರಾಣ, ಸಾಹಿತ್ಯ ಅಧ್ಯಯನದಿಂದ ಜ್ಞಾನವೃದ್ಧಿಯಾಗುತ್ತದೆ. ಹಲವು ಭಾಷೆಗಳ ಅಡಕತ್ತರಿಯಲ್ಲಿ ಸಿಲುಕಿದ್ದರಿಂದ ತುಳು ಭಾಷೆ ಕಡೆಗಣಿಸಲ್ಪಟ್ಟಿದೆ. ತುಳು ಭಾಷಿಗರು ಪರಿಶುದ್ಧವಾಗಿ ತುಳುವಲ್ಲಿ ಸಂವಹನ ಮಾಡಬೇಕು. ತುಳು ಭಾಷಾ ಪ್ರೇಮ ಆತ್ಮಜ್ಯೋತಿಯಾಗಿ ಅರಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

            ಅವರು ರವಿವಾರ ಶ್ರೀ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆಯ ಸಂದರ್ಭ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ 21ನೇ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

         ತುಳು ಭಾಷೆಯ ಏಳ್ಗೆಗಾಗಿ ಸಂಘಟಿತ ಪ್ರಯತ್ನವಾಗಬೇಕು. ತುಳುವರ ಸೇವಾ ಮನೋಭಾವ ಸಮಷ್ಟಿಯಲ್ಲಿ ಕಾಣಬೇಕು ಎಂದರು.

        ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಭಾಷೆಯು ಸಂಸ್ಕೃತಿ ಮತ್ತು ಭಾವನೆಯನ್ನು ಅರಳಿಸುತ್ತದೆ. ತುಳುನಾಡಿನ ಸಂಸ್ಕೃತಿ ಶ್ರೇಷ್ಠವಾದದ್ದು. ತಲ್ಲೀನತೆಯಲ್ಲಿ ಮಾಡುವ ಕೆಲಸಕ್ಕೆ ಯಶಸ್ಸು ನಿಶ್ಚಿತ ಎಂದರು.

              ಮಲಾರು ಜಯರಾಮ ರೈ ಬರೆದ ಕಬೀರೆರ ಕಮ್ಮೆನ, ಪ್ರೊ.ವಿ.ಬಿ.ಅರ್ತಿಕಜೆ ಬರೆದ ತುಳು ಹನುಮಾನ್‌ ಚಾಲೀಸಾ ಹಾಗೂ ಡಾ. ವಸಂತಕುಮಾರ ಪೆರ್ಲ ಬರೆದ ಮದಿಪುದ ಪಾತೆರೊಲು ಪುಸ್ತಕ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭ ಸಮ್ಮೇಳನಾಧ್ಯಕ್ಷ ಮಲಾರು ಜಯರಾಮ ರೈ ದಂಪತಿಯನ್ನು ಸಮ್ಮಾನಿಸಲಾಯಿತು.

          ಪುತ್ತೂರು ಒಡಿಯೂರು ಶ್ರೀ ಷಷ್ಟ್ಯಬ್ದ ಸಂಭ್ರಮ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್‌ ರೈ ಮಾತನಾಡಿದರು.

          ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಡಾ. ವಸಂತ ಕುಮಾರ್‌ ಪೆರ್ಲ ಸ್ವಾಗತಿಸಿದರು. ಯಶವಂತ ವಿ.ಸಮ್ಮೇಳನ ಅಧ್ಯಕ್ಷರನ್ನು ಪರಿಚಯಿಸಿದರು. ಒಡಿಯೂರು ಶ್ರೀ ಗುರುದೇವ ಐ.ಟಿ.ಐ. ಪ್ರಾಚಾರ್ಯ ಕರುಣಾಕರ ಎನ್‌. ಬಿ. ವಂದಿಸಿದರು. ದೇವಿಪ್ರಸಾದ್‌ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಬೆಳಗ್ಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಯಿತು.

                                 ತುಳು ತುಲಿಪು – ಪರಪೋಕು ಕರಿನ ಒರಿನ ಸಂಸ್ಕೃತಿ
       ತುಳು ತುಲಿಪು-ಪರಪೋಕು ಕರಿನ ಒರಿನ ಸಂಸ್ಕೃತಿಯ ಬಗ್ಗೆ ವಿಚಾರಗೋಷ್ಠಿ ನಡೆಯಿತು. ಕರಿನ ಸಂಸ್ಕೃತಿ ಬಗ್ಗೆ ಎರ್ಮಾಳ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಡಾ| ಜ್ಯೋತಿ ಚೇಳಾçರು ಮಾತನಾಡಿದರು. ಅಖೀಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಒರಿನ ಸಂಸ್ಕೃತಿ ಬಗ್ಗೆ ಮಾತನಾಡಿದರು. ಯೋಗೀಶ್‌ ರಾವ್‌ ಚಿಗುರುಪಾದೆ, ವಿದ್ಯಾಶ್ರೀ ಎಸ್‌. ಉಳ್ಳಾಲ ಸ್ವರಚಿತ ಕವಿತೆ ವಾಚಿಸಿದರು. ರವಿರಾಜ್‌ ಶೆಟ್ಟಿ ಒಡಿಯೂರು ರಾಗ ಸಂಯೋಜನೆ ಮಾಡಿದರು. ಜೈಗುರುದೇವ ಕಲಾಕೇಂದ್ರದ ಸದಸ್ಯರು ಪ್ರಸ್ತುತಪಡಿಸಿದರು.

           ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಒಡಿಯೂರು ಸ್ವಾಗತಿಸಿದರು. ರಾಧಾಕೃಷ್ಣ ಕನ್ಯಾನ ವಂದಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries