ಕಾಸರಗೋಡು: ಮುಸ್ಲಿಂ ಯೂತ್ ಲೀಗ್‌ನ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸೈಯದ್ ಮುನವ್ವರಲಿ ಶಿಹಾಬ್ ಶ್ರೀಮದ್ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರನ್ನು ಭೇಟಿಯಾಗಿ ಸೌಹಾರ್ಧ ಮಾತುಕತೆ ನಡೆಸಿದರು.
ಮಠದ ಪ್ರತಿನಿಧಿಗಳಾದ ಸೂರ್ಯ ನಾರಾಯಣ ಮತ್ತು ಸತೀಶ್ ಅವರು ಸ್ವಾಗತ ನೀಡಿದರು.
ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮಿತಿ ನಡೆಸಿದ ಮುಖಾಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಕಾಸರಗೋಡಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಅವರು ಮಠಕ್ಕೆ ಆಗಮಿಸಿದ್ದರು.
ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಶ್ರಫ್ ಎಡನೀರು, ಪ್ರಧಾನ ಕಾರ್ಯದರ್ಶಿ ಟಿ.ಡಿ. ಕಬೀರ್, ಎಂ.ಎಸ್.ಎಫ್ ರಾಷ್ಟ್ರೀಯ ಉಪಾಧ್ಯಕ್ಷ ಮೊಹಮ್ಮದ್ ಸಾಜು, ಮಾಹಿನ್ ಕೇಳೋಟ್, ಅಬೂಬಕರ್ ಹಾಜಿ, ಒ.ಪಿ. ಹನೀಫ್ ಮತ್ತು ಮನಾಫ್ ಎಡನೀರು ಉಪಸ್ಥಿತರಿದ್ದರು.