ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾನುವಾರ ಸಂಜೆ ವಡೋದರಾದ ನಿಜಾಂಪುರ ಪ್ರದೇಶದ ಮೆಹ್ಸಾನನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.
ಫೆಬ್ರವರಿ 21 ರಂದು ನಡೆಯಲಿರುವ ನಾಗರಿಕ ಸಮಿತಿಗಳ ಚುನಾವಣೆಗೆ ಮುನ್ನ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ರೂಪಾನಿ ವಡೋದರಾಗೆ ಆಗಮಿಸಿದ್ದರು.
ಎರಡು ಸಭೆಗಳ ನಂತರ , ಅವರು ನಗರದ ನಿಜಾಂಪುರ ಪ್ರದೇಶದಲ್ಲಿ ನಡೆದ ಮೂರನೇ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು ಭಾಷಣ ಮಾಡುವಾಗ ರೂಪಾನಿ ಕುಸಿದು ಬಿದ್ದಾಗ ಹಿಂದೆ ನಿಂತಿದ್ದ ಬಾಡಿ ಗಾರ್ಡ್ ಅವನನ್ನು ಹಿಡಿಯಲು ಪ್ರಯತ್ನಿಸಿಲ್ಲ. ಆ ವೇಳೆ ಸಹಾಯಕ್ಕಾಗಿ ಬಿಜೆಪಿ ನಾಯಕರು ಧಾವಿಸಿದರೂ ಅಷ್ಟರಲ್ಲೇ ಸಿಎಂ ಕುಸಿದು ಬಿದ್ದಾಗಿತ್ತು. ಆದರೆ ಕೆಲ ನಿಮಿಷಗಳಲ್ಲಿ ಅವರು ಪುನಃಅ ಚೇತರಿಸಿಕೊಂಡಿದ್ದರು. ಆದರೆ ಮತ್ತೆ ಭಾಷಣ ಮುಂದುವರಿಸಲಿಲ್ಲ.
ಪ್ರಸ್ತುತ ಸಿಎಂ ಆರೋಗ್ಯದಲ್ಲಿ ಸುಧಾರಣೆ ಆಗಿದೆ, ಗಾಬರಿಯಾಗುವ ಅಗತ್ಯವಿಲ ಎಂದು ಅಹಮದಾಬಾದ್ ನ ಆಸ್ಪತ್ರೆಯ ಮೂಲಗಳು ಹೇಳಿದೆ.