ಕಾಸರಗೋಡು: ಕೆ.ಎಸ್.ಇ.ಬಿ. 110 ಕೆ.ವಿ. ವಿದ್ಯಾನಗರ ಸಬ್ ಸ್ಟೇಷನ್ ನಿಂದ 33 ಕೆ.ವಿ.ಅನಂತಪುರ ಸಬ್ ಸ್ಟೇಷನ್ ಗೆ ವಿದ್ಯುತ್ ಸರಬರಾಜು ನಡೆಸುವ 33 ಕೆ.ವಿ. ಅನಂತಪುರ ಲೈನ್ ಟಚ್ಚಿಂಗ್ ಕ್ಲಿಯರೆನ್ಸ್ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಫೆ.27ರಂದು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಕುಂಬಳೆ, ಸೀತಾಂಗೋಳಿ ವಿಭಾಗ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ಮೊಟಕು ನಡೆಯಲಿದೆ ಎಂದು ಸಹಾಯಕ ಇಂಜಿನಿಯರ್ ತಿಳಿಸಿರುವರು.