ಮಂಜೇಶ್ವರ: ಕೊರಗ ವಿಶೇಷ ಯೋಜನೆಯ ಭಾಗವಾಗಿ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಮಿಶನ್ ನಿರ್ದೇಶನದಲ್ಲಿ ಮೊಟ್ಟೆ ಕೋಳಿ ಸಾಕಾಣೆಯ ಮೊದಲ ಮಾರಾಟ ನಡೆಸಲಾಯಿತು.
ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ ಮೀಂಜ, ಮಂಜೇಶ್ವರ, ಪೈವಳಿಕೆ, ಬದಿಯಡ್ಕ ಗ್ರಾಮ ಪಂಚಾಯತಿಗಳಲ್ಲಿ 10 ಮೊಟ್ಟೆ ಕೋಳಿ ಸಾಕಣಾ ಘಟಕಗಳನ್ನು ಆರಂಭಿಸಲಾಗಿದ್ದು ಎರಡು ತಿಂಗಳಲ್ಲೇ ಉತ್ತಮ ಉತ್ಪಾದನೆಯನ್ನು ಮಾಡಲಾಗಿದ್ದು ಹೆಚ್ಚು ಘಟಕಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಕೊರಗ ಬ್ರಿಡ್ಜ್ ಕೋರ್ಸ್ ತರಗತಿಯ ಮಕ್ಕಳಿಗೆ ಮೊಟ್ಟೆಯನ್ನು ವಿತರಿಸಲಾಯಿತು.
ಮೀಂಜದ ಅಡ್ಕದಗುರಿಯಲ್ಲಿ ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿಯವರು ಉದ್ಘಾಟನೆ ನಡೆಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಯರಾಮ ಬಲ್ಲಂಗುಡೇಲು ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯತಿ ಸದಸ್ಯೆ ಮಿಸ್ರಿಯ ಕುಂಞ, ಕಾರ್ಯದರ್ಶಿ ಇ.ಶಾನ್‍ವಾಸ್ ಉಪಸ್ಥಿತರಿದ್ದರು. ಕೊರಗ ವಿಶೇಷ ಯೋಜನೆಯ ಸಂಯೋಜಕ ಜಯಕೃಷ್ಣನ್, ಯದುರಾಜ್, ಸಿಡಿಎಸ್ ಲೆಕ್ಕಪರಿಶೋಧಕ ಉದಯಕುಮಾರ್.ಸಿ, ಶಮೀಮ, ಮೀನಾಕ್ಷಿ ಬೊಡ್ಡೋಡಿ ನೇತೃತ್ವ ವಹಿಸಿದ್ದರು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಲತಾದೇವಿ ಸ್ವಾಗತಿಸಿ, ವಂದಿಸಿದರು.