HEALTH TIPS

ಯಕ್ಷಗಾನ ಶಿಬಿರದಲ್ಲಿ ತಾಳಮದ್ದಳೆ ಪ್ರಾತ್ಯಕ್ಷಿಕೆ-ಸಹವಾಸ ಶಿಬಿರಗಳಿಂದ ಯಕ್ಷಗಾನ ಬೆಳವಣಿಗೆಗೆ ಪೂರಕ-ವೀ.ಜಿ.ಕಾಸರಗೋಡು

  

     ಕುಂಬಳೆ: ಯಕ್ಷಗಾನದ ವಾತಾವರಣ ಮನೆಮನೆಯಲ್ಲಿ ನಿರ್ಮಾಣವಾಗಬೇಕು. ಆ ಮೂಲಕ ಯಕ್ಷಗಾನದ ಆಸಕ್ತಿಯನ್ನು ಸಮಾಜದ ಎಲ್ಲರಿಗೂ ತಲುಪಿಸುವ ಕಾರ್ಯ ಸಾಧ್ಯ ಎಂದು ಯಕ್ಷಗಾನ ಕಲಾವಿದ ವೀಜಿ ಕಾಸರಗೋಡು ಅವರು ಅಭಿಪ್ರಾಯಪಟ್ಟರು.

         ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಇದರ ನೇತೃತ್ವದಲ್ಲಿ ನಡೆಯುತ್ತಿರುವ ಎರಡು ತಿಂಗಳ ಯಕ್ಷಗಾನ ನಾಟ್ಯ ತರಬೇತಿ ಶಿಬಿರದ ಅಂಗವಾಗಿ ಎಯ್ಯೂರು ಸತೀಶ್ ಭಟ್ ಅವರ ನಿವಾಸದಲ್ಲಿ ನಡೆದ ಒಂದು ದಿನದ ಸಹವಾಸ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

        ಯಕ್ಷಗಾನವು ತಳಮಟ್ಟದಿಂದ ಮನೆಮನೆಗಳಲ್ಲಿ ಪ್ರದರ್ಶನಗೊಳ್ಳುತ್ತ ಬೆಳೆದುಬಂದ ಕಲೆ. ಆದುದರಿಂದ ಈ ರೀತಿಯ ಸಹವಾಸ ಶಿಬಿರಗಳು ಯಕ್ಷಗಾನಕ್ಕೆ ಮತ್ತೆ ಬಲವನ್ನು ತುಂಬುವಲ್ಲಿ ಸಹಕಾರಿಯಾಗಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. 


          ಸಹವಾಸ ಶಿಬಿರ ನಡೆಸಲು ತಮ್ಮ ನಿವಾಸದಲ್ಲಿ ಅವಕಾಶ ನೀಡಿದ ಮನೆಯ ಯಜಮಾನ ಎಯ್ಯೂರು ಸತೀಶ್ ಭಟ್ ದೀಪ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯಕ್ಷಗುರು ದಿವಾಣ ಶಿವಶಂಕರ ಭಟ್ ಅವರು, ಒಂದು ದಿನದ ಶಿಬಿರವನ್ನು ತಮ್ಮ ನಿವಾಸದಲ್ಲಿ ನಡೆಸುವುದಕ್ಕೆ ಮುಂದಾಗಿ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿದ ಸತೀಶ್ ಭಟ್ ಇವರು ಮಾದರಿಯ ಕಾರ್ಯವನ್ನು ಮಾಡಿದ್ದಾರೆ. ಒಂದು ಕಾಲದಲ್ಲಿ ಯಕ್ಷಗಾನದ್ದೆ ನೆಲವಾಗಿದ್ದ ಈ ಪ್ರದೇಶದಲ್ಲಿ ಇಂದೀಗ ಶಿಬಿರ ನಡೆಯುತ್ತಿರುವುದು ಮತ್ತೆ ಯಕ್ಷಗಾನ ಪ್ರಜ್ಞೆಯನ್ನು ಬಲಗೊಳಿಸುವಲ್ಲಿ ಸಹಕಾರಿ ಎಂದು ತಿಳಿಸಿದರು. 

         ಶಿಬಿರದ ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ, ಎರಡು ತಿಂಗಳ ಶಿಬಿರದಲ್ಲಿ ಇದೊಂದು ವಿಶೇಷ ದಿನ. ಪ್ರಕೃತಿ ರಮಣೀಯ ಪ್ರದೇಶದಲ್ಲಿವಿದ್ಯಾರ್ಥಿಗಳು ಹಾಗೂ ಮನೆಯ ಸದಸ್ಯರು ಜೊತೆಯಾಗಿ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡುದು ಶಿಬಿರಾರ್ಥಿಗಳಿಗೆ ಹೊಸ ಅನುಭವವನ್ನು ಉಂಟುಮಾಡಲು ಸಹಕಾರಿ ಎಂದರು.

         ಯಕ್ಷಗಾನ ಕಲಾವಿದರಾದ ಶ್ರೀ ಪುಂಡಿಕೈ ರಾಜೇಂದ್ರ ಪ್ರಸಾದ್ ಶುಭಹಾರೈಸಿದರು. ಸಂಯೋಜಕ ಕಾರ್ತಿಕ್ ಪಡ್ರೆ, ಶಿಬಿರಾರ್ಥಿಗಳಾದ ದಿವ್ಯ ಶ್ರೀ, ಸೌಮ್ಯಶ್ರೀ,ದರ್ಶಿನಿ, ಶ್ರದ್ಧಾ, ಮೇಧಾ ಮತ್ತು ಅಚಿಂತ್ ಶಿಬಿರದ ಅನುಭವವನ್ನು ಹಂಚಿಕೊಂಡರು. ಕಾರ್ತಿಕ್ ಪಡ್ರೆ ಸ್ವಾಗತಿಸಿ, ವಿನಯ ಚಿಗುರುಪಾದೆ ವಂದಿಸಿದರು. ಶಿಬಿರಾರ್ಥಿ ದಿವ್ಯಶ್ರೀ ಪ್ರಾರ್ಥನೆ ಹಾಡಿದರು.

         ಬಳಿಕ ಹಿರಿಯ ಕಲಾವಿದರ ಹಾಗೂ ಶಿಬಿರಾರ್ಥಿಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಜನನ ಯಕ್ಷಗಾನ ತಾಳಮದ್ದಳೆ ಪ್ರಾತ್ಯಕ್ಷಿಕೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರೋಹಿಣಿ ದಿವಾಣ, ಸಚಿನ್ ಕುದ್ರೆಪ್ಪಾಡಿ, ಷಣ್ಮುಖ ಕೃಷ್ಣ ಆರೋಳಿ, ಚೆಂಡೆ ಮತ್ತು ಮದ್ದಳೆಯಲ್ಲಿ ಪುಂಡಿಕೈ ರಾಜೇಂದ್ರ ಪ್ರಸಾದ್ ಹಾಗೂ ದಿವಾಣ ಶಿವಶಂಕರ ಭಟ್ ಸಹಕರಿಸಿದರು.

         ಮುಮ್ಮೇಳದಲ್ಲಿ ಹಿರಿಯ ಕಲಾವಿದರಾದ  ದಿವಾಣ ಶಿವಶಂಕರ ಭಟ್, ಶೇಣಿ ವೇಣುಗೋಪಾಲ, ಶಿಬಿರಾರ್ಥಿಗಳಾದ ವಿನಯ ಚಿಗುರುಪಾದೆ, ಕಾರ್ತಿಕ್ ಪಡ್ರೆ, ಸುಜಾತಾ ಎನ್, ಅನಘಾ ಲಕ್ಷ್ಮೀ ಹಾಗೂ ಶ್ರದ್ಧಾ ಎಸ್ ಪಾಲ್ಗೊಂಡರು.

         ಪುತ್ತಿಗೆ ಪಂಚಾಯತಿ ಮಾಜಿ ಅಧ್ಯಕ್ಷೆ ಲಕ್ಷ್ಮೀ ಭಟ್, ಭರತನಾಟ್ಯ ಕಲಾವಿದೆ ಅಕ್ಷತಾ, ಅಧ್ಯಾಪಕ ರವಿಶಂಕರ ದೊಡ್ಡಮಾಣಿ, ಕಲಾಭಿಮಾಣಿಗಳಾದ ದೀಪ, ರೇವತಿ, ಬಳಗದ ಕಾರ್ಯದರ್ಶಿ ಸೌಮ್ಯಾ ಪ್ರಸಾದ್,ಎಂ.ಫಿಲ್ ವಿದ್ಯಾರ್ಥಿಗಳಾದ ಸುಜಾತಾ, ಆರ್ಶಿತಾ ಮತ್ತಿತರರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries