HEALTH TIPS

ಆರೋಗ್ಯ ಸಚಿವೆಯೇ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕೋವಿಡ್ ಮಾನದಂಡ ಉಲ್ಲಂಘನೆ-ಜಾಗತಿಕ ಸ್ಟೇಟರ್ಜಿ ಎಲ್ಲಿ?- ಸಂಶಯಗಳಿಗೆ ಎಡೆಮಾಡಿದ ಅದಾಲತ್

                           

       ಕಣ್ಣೂರು: ಕೋವಿಡ್ ನಿಯಂತ್ರಣದಲ್ಲಿ ಜಗತ್ತಿಗೇ ಮಾದರಿ ನೇತೃತ್ವ ವಹಿಸಿದ ಸಚಿವರೆಂದೇ ಬಿಂಬಿಸಲ್ಪಟ್ಟಿರುವ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪಾಲ್ಗೊಂಡ  ಸರ್ಕಾರಿ ಅದಾಲತ್ ನಲ್ಲಿ ಸಾರ್ವಜನಿಕರು ಕೋವಿಡ್ ನಿಯಂತ್ರಣಗಳನ್ನು ಮರೆತು ಕಿಕ್ಕಿರಿದು ನೆರೆದಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

         ಕಣ್ಣೂರು ತಳಿಪರಂಬದಲ್ಲಿ ನಿನ್ನೆ ನಡೆದ ಅದಾಲತ್ ನಲ್ಲಿ ಕೋವಿಡ್ ನಿಯಮಗಳ ಸಂಫೂರ್ಣವಾಗಿ ಉಲ್ಲಂಘನೆ ನಡೆದಿರುವುದು ಸಾಬೀತಾಗಿದೆ. ಅದಾಲತಿಗೆ ಆಗಮಿಸಿದ ಜನರು ಮಾಸ್ಕ್ ಧರಿಸಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ದೊಡ್ಡ ಲೋಪವೆಸಗಿರುವುದು ಮಾಧ್ಯಮಗಳ ಕಣ್ಣಿಗೆ ಬೀಳುವುದರೊಂದಿಗೆ ವಿವಾದವಾಗಿ ಪರಿಣಮಿಸಿತು.   

       ಆರೋಗ್ಯ ಸಚಿವೆ ಕೆ.ಕೆ.ಶೈಲಜಾ, ಸಚಿವರಾದ ಇ.ಪಿ.ಜಯರಾಜನ್ ಮತ್ತು ಕಡಗಂಪಳ್ಳಿ  ರಾಮಚಂದ್ರನ್ ಅವರು ಅದಾಲತ್‍ನಲ್ಲಿ ಭಾಗವಹಿಸಿದ್ದರು.  ಜಿಲ್ಲಾಡಳಿತ ಆಯೋಜಿಸಿದ್ದ ಅದಾಲತ್ ಗೆ ಬೃಹತ್ ಸಂಖ್ಯೆಯ ಜನರು ತಂಡೋಪತಂಡವಾಗಿ ಆಗಮಿಸಿದ್ದರಿಂದ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಪೋಲೀಸರಿಗೆ ಸಾಧ್ಯವಾಗಲಿಲ್ಲ.

        ಜನರು ಕಿಕ್ಕಿರಿದು ನೆರೆದು ಸಮಸ್ಯೆ ಸೃಷ್ಟಿಯಾಯಿತು.  ಈ ಪೈಕಿ ವೃದ್ಧರು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು. ಆರೋಗ್ಯ ಸಚಿವೆ ಸೇರಿದಂತೆ ಇತರ ಸಚಿವರೂ ಹಾಜರಿದ್ದ ಸಮಾರಂಭದಲ್ಲಿ ಯಾವುದೇ ಕೋವಿಡ್ ನಿಯಂತ್ರಣ ಉಪಕ್ರವಗಳ ಅನುಸರಣೆ ಕಂಡುಬಂದಿಲ್ಲ. 

        ಅದಾಲತ್ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಒಂಬತ್ತು ಗಂಟೆಯ ಮೊದಲೇ ಜನರ ಗುಂಪೆÇಂದು ಬಂದು ಆ ಪ್ರದೇಶದಲ್ಲಿ ಕಾಯುತ್ತಿತ್ತು. ಕಾರ್ಯಕ್ರಮ ನಿದಿತ ಸಮಕ್ಕಿಂತ ಅರ್ಧ ಗಂಟೆ ತಡವಾಗಿ ಪ್ರಾರಂಭವಾಯಿತು.  ಕೌಂಟರ್‍ಗಳನ್ನು ಸರಿಯಾಗಿ ಹೊಂದಿಸದಿರುವುದರಿಂದ ಜನಸಂದಣಿಗೆ ಕಾರಣವಾಯಿತು ಮತ್ತು ಅದಾಲತ್ ವ್ಯವಸ್ಥಿತವಾಗಿ ಆಯೋಜಿಸದಿರುವುದು ಜನರು ಜಾತ್ರೆಯಂತೆ ಸೇರಲು ಕಾರಣವಾಯಿತೆನ್ನಲಾಗಿದೆ. ಕೋವಿಡ್ ನಿಯಂತ್ರಣಗಳು ಇದೀಗ ಅತೀ ಹೆಚ್ಚು ನಿಗಾದಲ್ಲಿದೆಯೆಂದು ಹೇಳುವ ಸರ್ಕಾರ ಮತ್ತು ಸ್ವತಃ ಆರೋಗ್ಯ ಸಚಿವೆಯ ಎದುರಲ್ಲೇ ಇಂತಹ ಘಟನೆ ನಡೆದಿರುವುದು ಹಲವು ಸಂಶಯಗಳಿಗೂ ಇದೀಗ ಎಡೆಮಾಡಿದೆ. ಫೆಬ್ರವರಿ 10 ರವರೆಗೆ ಬಲವಾದ ಪೋಲೀಸ್ ಕಣ್ಗಾವಲು ಮತ್ತು ನಿಬಂಧನೆಗಳಿವೆ ಎಂದು ಇದೇ ಸಚಿವೆ ಕೆಲವು ದಿನಗಳ ಹಿಂದೆ ಹೇಳಿದ್ದು ಇಲ್ಲಿ ಉಲ್ಲೇಕಾರ್ಹ. 

         ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿರುವ ಪ್ರದೇಶಗಳ ಮೇಲೆ ಪೋಲೀಸರು ನಿಗಾ ಇಡಲಿದ್ದಾರೆ. ಅಗತ್ಯವಿರುವ ಕಡೆ ದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ನಿಬರ್ಧಂಗಳನ್ನು ಬಲಪಡಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

           ಶಾಪಿಂಗ್ ಮಾಲ್‍ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಜನರು ಸೇರುವ ಸಾಧ್ಯತೆ ಇರುವ ಆಸ್ಪತ್ರೆಗಳಲ್ಲಿ ಪೋಲೀಸ್ ಕಣ್ಗಾವಲು ತೀವ್ರಗೊಳಿಸಲಾಗುವುದು. ಮಾಸ್ಕ್ ಮತ್ತು ಸಾಮಾಜಿಕ ದೂರವನ್ನು ಮುಖ್ಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ರಾತ್ರಿ 10 ರ ನಂತರ ಅನಗತ್ಯ ಪ್ರಯಾಣವನ್ನು ನಿಯಂತ್ರಿಸುವುದು ಮತ್ತು ಜನಸಂದಣಿ ಸೇರದಂತೆ ಪೋಲೀಸರು ಗಮನ ಹರಿಸಿರುವ ಮಧ್ಯೆ ಇಂತಹದೊಂದು ಲೋಪ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಸಂಶಯ ಮತ್ತು ಭಯಕ್ಕೆ ಕಾರಣವಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries