ಕಾಸರಗೋಡು: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರಿನಲ್ಲಿ ನಡೆಯಲಿರುವ 24ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡ ಕನ್ನಡ ಸೇವೆಗಾಗಿ ಕಸರಗೋಡಿನ ಪತ್ರಕರ್ತ, ಲೇಖಕ, ಜಾನಪದ ಸಂಘಟಕ ರವಿ ನಾಹಯ್ಕಾಪು ಅವರಿಗೆ ವಿಶೇಷ ಸನ್ಮಾನ ಸಮಾರಂಭ ಫೆ. 14ರಂದು ಸಂಜೆ 4ಕ್ಕೆ ನಡೆಯಲಿದೆ. ವಿದ್ವಾಂಸ ಡಾ. ಪ್ರಭಾಕರ ಜೋಷಿ ಅವರ ಅಧ್ಯಕ್ಷತೆಯಲ್ಲಿ ಸಾಮಜಿಕ, ಸಾಂಸ್ಕøತಿಕ ಧಾರ್ಮಿಕ ಕ್ಷೇತ್ರಗಳ ವರಿಷ್ಠರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ.
ರವಿ ನಾಯ್ಕಾಪು ಅವರು ದಾನಗಂಗೆ, ಸ್ನೇಹ ಗಂಗೆ ಹಾಗೂ ಗಾನ ಗಂಗೆ ಎಂಬ ವಿವಿಧ ಕೃತಿಗಳನ್ನು ರಚಿಸಿದ್ದು, ಇವರ ಸ್ನೇಹ ಗಂಗೆ ಕೃತಿಗೆ ಅಂಧೇರಿ ಕರ್ನಾಟಕ ಸಂಘವು ಕನ್ನಡ ಸಾಹಿತ್ಯ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕ ಕೋಶಾಧಿಕಾರಿ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.