ತಿರುವನಂತಪುರ: ಶಬರಿಮಲೆ ಸಮಸ್ಯೆಯನ್ನು ತನ್ನ ಚುನಾವಣಾ ಪ್ರಚಾರ ತಂತ್ರವಾಗಿ ಬಳಸಿಕೊಂಡಿರುವ ಯುಡಿಎಫ್ ಬಗ್ಗೆ ಯಾವೊಂದು ಪ್ರತಿತಂತ್ರವನ್ನೂ ಹೆಣೆಯದೆ ತೆಪ್ಪಗಿರಲು ಸಿಪಿಎಂ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ನಿರ್ಧಾರವನ್ನು ರಾಜ್ಯ ಕಾರ್ಯದರ್ಶಿ ತೆಗೆದುಕೊಂಡಿರುವರೆಂದು ಮೂಲಗಳು ತಿಳಿಸಿವೆ. ಭಾವನಾತ್ಮಕ ನಿರ್ಧಾರಗಳಿಗೆ ಪ್ರತಿಕ್ರಿಯೆಯಾಗಿ ಯಾವುದೇ ರೀತಿಯಲ್ಲಿ ಚರ್ಚಿಸದಿರಲು ಸಿಪಿಎಂ ಪಕ್ಷ ನಿರ್ಧರಿಸಿದೆ. ಶಬರಿಮಲೆ ವಿವಾದ ನ್ಯಾಯಾಲಯದ ಪರಿಗಣನೆಯಲ್ಲಿರುವುದರಿಂದ ಈ ವಿಷಯಕ್ಕೆ ಪ್ರತಿಕ್ರಿಯಿಸದಿರಲು ನಿರ್ಧರಿಸಿತೆಂದು ಹೇಳಲಾಗಿದೆ.
ಆದರೆ ಸಿಪಿಎಂ ಮುಸ್ಲಿಂ ಲೀಗ್‍ನ ಬಗ್ಗೆ ನಡೆಸುವ ಟೀಕೆ ಮುಂದುವರಿಸಲಿದೆ. ಟೀಕೆ ಜಮಾತ್-ಎ-ಇಸ್ಲಾಮಿಯೊಂದಿಗಿನ ಸಂಬಂಧವನ್ನು ಆಧರಿಸಿದೆ. ಲೀಗ್‍ನ ಟೀಕೆ ಮುಸ್ಲಿಮರ ವಿರುದ್ಧ ನಿರ್ದೇಶಿಸಲ್ಪಟ್ಟಿಲ್ಲ ಎಂದು ಸಿಪಿಎಂ ತಿಳಿಸಿದೆ.
ಶಬರಿಮಲೆ ವಿಷಯ ಮುಂದಿರಿಸಿ ಸಿಪಿಎಂ ನ್ನು ಕಾಂಗ್ರೆಸ್ ಟೀಕಿಸಿತ್ತಿದೆ.ಯುಡಿಎಫ್ ಅಧಿಕಾರಕ್ಕೆ ಬಂದರೆ ಶಬರಿಮಲೆ ವಿಷಯದ ಬಗ್ಗೆ ಶಾಸನ ರಚಿಸುವುದಾಗಿ ಚೆನ್ನಿತ್ತಲ ಮತ್ತು ಚಾಂಡಿ ಹೇಳಿದ್ದರು. ಶಬರಿಮಲೆ ವಿಷಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಯುಡಿಎಫ್ ಒತ್ತಾಯಿಸಿತ್ತು.