ಕುಂಬಳೆ: ಇತಿಹಾಸ ಪ್ರಸಿದ್ದ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ವಾರ್ಷಿಕ ಮಹೋತ್ಸವ ಇಂದು ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 8ರಿಂದ ಗಣಪತಿಹವನ, ವೇದಪಾರಾಯಣ, ಬಿಂಬಶುದ್ದಿ, ನವಕಾಭಿಷೇಕ, 8.30 ರಿಂದ ಕೆ.ವಿ.ರಾಜನ್ ಮಾರಾರ್ ಪಯ್ಯನ್ನೂರು ಅವರಿಂದ ಸೋಪಾನ ಸಂಗೀತ, 10 ರಿಂದ ಭಕ್ತಿಗೀತೆ, 11.15 ರಿಂದ ತುಲಾಭಾರ ಸೇವೆ, 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 6.40 ರಿಂದ ದೀಪಾರಾಧನೆ, ಶಾಸ್ತಾರ ವನದಲ್ಲಿ ಭಜನೆ, ರಾತ್ರಿ 7 ರಿಂದ ರಾತ್ರಿಪೂಜೆ, 7.30 ರಿಂದ ಶ್ರೀಭೂತಬಲಿ, ಬೆಡಿಕಟ್ಟೆಪೂಜೆ, ರಾತ್ರಿ 10ಕ್ಕೆ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.