ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯಲ್ಲಿ ಕರ್ನಾಟಕ ಬ್ಯಾಂಕ್ ನ ಸಿ.ಎಸ್.ಆರ್ ಸ್ಕೀಮ್ ನ ಸಹಯೋಗದೊಂದಿಗೆ ನಿರ್ಮಿಸಲಾದ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನ ಭೋಜನಾಶಾಲೆಯ ಹಾಲ್ ನ್ನು ಟೈಲ್ಸ್ ಹಾಸಿ ನವೀಕರಿಸಲಾಗಿದೆ. ನೂತನ ಹಾಲ್ ನ್ನು ಕರ್ನಾಟಕ ಬ್ಯಾಂಕ್ ನ ಪ್ರಧಾನ ಪ್ರಬಂಧಕ ನಾಗರಾಜ ರಾವ್ ಅವರು ಶಿಲಾಫಲಕವನ್ನು ಅನಾವಾರಣಗೊಳಿಸುವ ಮೂಲಕ ಉದ್ಘಾಟಿಸಿದರು.
ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ ಉಪಜಿಲ್ಲಾ ಎನ್.ಎಂ.ಪಿ ಅಧಿಕಾರಿ ಜಿತೇಂದ್ರ, ಕೃಷಿಕರಾದ ಸೂರ್ಯನಾರಾಯಣ ಮಯ್ಯ, ಮೀಂಜ ಗ್ರಾ.ಪಂ.ಸದಸ್ಯೆ ರುಖಿಯಾ ಸಿದ್ದಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಾಶಂಸನೆ ಗೈದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್.ರಾವ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್, ಮಾತೃಸಂಘದ ಅಧ್ಯಕ್ಷೆ ಕೈರುನ್ನಿಸಾ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ ಸ್ವಾಗತಿಸಿ, ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕ ಭಾಷಣಗೈದರು. ಶಾಲಾ ಮುಖ್ಯೋಪಾಧ್ಯಾಯ ಸುಧಾಕರ ವಿ ವಂದಿಸಿದರು. ಕಾರ್ಯಕ್ರಮವನ್ನು ಅಧ್ಯಾಪಕ ಬಾಲಕೃಷ್ಣ ಎಂ ನಿರೂಪಿಸಿದರು.