HEALTH TIPS

ಆದಿಶಂಕರ ನೆಲದಲ್ಲಿ ಭಯೋತ್ಪಾದನೆ ಮತ್ತು ಭ್ರಷ್ಟಾಚಾರಕ್ಕೆ ಉತ್ತೇಜಿಸುವುದು ಕಮ್ಯುನಿಸ್ಟ್ ಸರ್ಕಾರದ ರಹಸ್ಯ ತಂತ್ರ-ಯೋಗಿ ಆದಿತ್ಯನಾಥ್-ಬಿಜೆಪಿ ವಿಜಯ ಯಾತ್ರೆ ಉದ್ಘಾಟಿಸಿ ಅಭಿಮತ

     

           ಕಾಸರಗೋಡು: ಕಮ್ಯುನಿಸ್ಟರು ಕೇರಳದ ಮಣ್ಣನ್ನು ಜಿಹಾದ್ ಮತ್ತು ಭಯೋತ್ಪಾದಕರ ಮಣ್ಣಾಗಿ ಪರಿವರ್ತಿಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಭಾರತ ಉದ್ದಗಲ ಸಂಚರಿಸಿ ಸನಾತನತೆಯನ್ನು ಎತ್ತಿಹಿಡಿದ ಆದಿ ಶಂಕರ ಮತ್ತು ಸಾಮಾಜಿಕ ಐಕ್ಯತೆಯ ಕಹಳೆ ಮೊಳಗಿಸಿದ ಶ್ರೀ ನಾರಾಯಣ ಗುರುಗಳ ನೆಲವನ್ನು ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿ ಮಾರ್ಪಡಿಸಲು ಎಡರಂಗ ಸರ್ಕಾರ ಅನುವುಮಾಡಿದೆ ಎಂದು ಆದಿತ್ಯನಾಥ್ ಎಚ್ಚರಿಸಿದ್ದಾರೆ. 


     ಬಿಜೆಪಿ ಕೇರಳ ರಾಜ್ಯ ಸಮಿತಿ ಆಯೋಜಿಸಿರುವ ವಿಜಯ ಯಾತ್ರೆಗೆ ಭಾನುವಾರ ಸಂಜೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ಯಾತ್ರೆಯ ಮುಖಂಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.           

         ಕೇರಳದ ಕಮ್ಯುನಿಸ್ಟ್ ಸರ್ಕಾರ ನಿಖರವಾಗಿ ಭಯೋತ್ಪಾದಕ ಸಂಘಟನೆಗಳ ಬಳಿ ಇದೆ. ರ್ಯಾಲಿಗಳನ್ನು ನಡೆಸಲು ಮತ್ತು ರಾಷ್ಟ್ರೀಯತೆಯ ರಕ್ಷಕರಾದ ಆರ್.ಎಸ್.ಎಸ್. ವಿರುದ್ಧ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಜಪಿಸಲು ಸರ್ಕಾರ ನೇರವಾಗಿ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡಿದೆ. ಸರ್ಕಾರದ ಎಲ್ಲಾ ಪಿತೂರಿಗಳು ಭಯೋತ್ಪಾದಕರಿಗೆ ನೇರವಾಗಿ ಸಹಾಯ ಮಾಡುವ ಮೂಲಕ ಸ್ವತಃ ಸರ್ಕಾರವು ಭಯಾತಂಕವಿಲ್ಲದೆ ಎಲ್ಲವನ್ನೂ ಮಾಡುತ್ತಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಕಮ್ಯುನಿಸ್ಟ್ ಸರ್ಕಾರದ ಭಯೋತ್ಪಾದನಾ ಪರ ನೀತಿಯನ್ನು ಗುರುತಿಸಿ ನೆನಪಿರಿಸಬೇಕು ಎಂದು ಆದಿತ್ಯನಾಥ್ ಕೇರಳದ ಜನರಿಗೆ ನೆನಪಿಸಿದರು.

      ಲವ್ ಜಿಹಾದ್ ನ್ನು ಬೇಕೆಂದೇ ಮರೆಮಾಚಿ ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡುತ್ತಿರುವ ಎಡರಂಗ ಎಂದಿಗೂ ಅಪಾಯಕಾರಿ. ಇಲ್ಲಿಯವರೆಗೆ ಕೇರಳದ ಕಮ್ಯುನಿಸ್ಟ್ ಸರ್ಕಾರಕ್ಕೆ ಜಿಹಾದ್ ವಿರುದ್ಧ ಯಾವುದೇ ಕಾನೂನು ಜಾರಿಗೆ ತರಲು ಸಾಧ್ಯವಾಗಲಿಲ್ಲ, ಇದನ್ನು ನ್ಯಾಯಾಲಯವು ಕಟ್ಟುನಿಟ್ಟಾಗಿ ಆದೇಶಿಸಿ ಸಾಬೀತುಪಡಿಸಿದೆ. ಇದೇ ವೇಳೆ ಕೇರಳದ ನಂಬಿಕೆಗಳಿಗೆ ಪ್ರಹಾರ ಗೈದು  ಸಮುದಾಯವನ್ನು ಮೆಟ್ಟುತ್ತಿರುವುದು ಭಯೋತ್ಪಾದಕ ಸಂಘಟನೆಗಳಿಗೆ ಸಹಾಯಕರವಾಗಿದೆ. ಶಬರಿಮಲೆ ಸಂಚಿನ ಮೂಲಕ ಹಿಂದೂಗಳನ್ನು ಹಿಂಸಿಸಿದ ಸರ್ಕಾರ ರಾಜ್ಯಾಡಳಿತ ನಡೆಸಿರುವುದು ದುರ್ದೈವ. ಸರ್ಕಾರವು ಧಾರ್ಮಿಕ ಸಹಿಷ್ಣುತೆಯನ್ನು ನಾಶಪಡಿಸುತ್ತಿದೆ ಮತ್ತು ಕ್ರಿಶ್ಚಿಯನ್ ಚರ್ಚುಗಳನ್ನು ನಾಶಪಡಿಸುತ್ತಿದೆ. ಧರ್ಮದ ಹೆಸರಿನಲ್ಲಿ ಜನರ ಮನಸ್ಸಿನಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸಲು ಕೇರಳದ ಜನರು ಹಲಾಲ್ ಬ್ಯಾಂಕ್‍ಗೆ ನೀಡಿದ ಬೆಂಬಲವನ್ನು ಅರಿತುಕೊಳ್ಳಬೇಕು ಎಂದು ಆದಿತ್ಯನಾಥ್ ಹೇಳಿದರು.  ಪ್ರತಿಕೂಲ ಸನ್ನಿವೇಶದಲ್ಲೂ ಕೇರಳದಲ್ಲಿ ಬಿಜೆಪಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ರಾಜ್ಯದ ಆಡಳಿತವನ್ನು ಸುಧೀರ್ಘ ಕಾಲದಿಂದ ನಿರ್ವಹಿಸುತ್ತಿರುವ ಎಡರಂಗ, ಕಾಂಗ್ರೆಸ್ಸ್ ಪಕ್ಷಗಳು ಹಿಂದೂ ಧಮನಕಾರಿ ನೀತಿಯ ಮೂಲಕ ಜನವಂಚನೆ ನಡೆಸುತ್ತಿದೆ. ಆದರೆ ಬಿಜೆಪಿ ಕೇರಳದಲ್ಲಿ ಬಲಗೊಂಡಲ್ಲಿ ಸರ್ವ ಜನರಿಗೂ ಹಿತವನ್ನುಂಟುಮಾಡುವ ಆಡಳಿತ ನೀಡಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು. 


        ಶತಮಾನಗಳ ನಂಬಿಕೆಯನ್ನು ಅಲುಗಾಡಿಸುವ ಶಬರಿಮಲೆ ಮಹಿಳಾ ಪ್ರವೇಶ ನಡೆಸುವ ಮೂಲಕ ಕಮ್ಯುನಿಸ್ಟ್ ಪಕ್ಷ ಲಕ್ಷಾಂತರ ಜನರನ್ನು ವಂಚಿಸಿ ಪ್ರಹಾರ ನಡೆಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ಸಾಕಾರಗೊಳಿಸುವ ಮೂಲಕ ರಾಷ್ಟ್ರ ಮಂದಿರವಾಗಿ ಪರಿವರ್ತಿಸುವ ಸಾಧನೆ ಮಾಡಲಾಗಿದೆ ಎಂದು ಯೋಗಿಆದಿತ್ಯನಾಥ್ ತಿಳಿಸಿದರು. 

       ರಾಜ್ಯದ ಪ್ರಸ್ತುತ ಆಡಳಿತ ನಡೆಸುವ ಎಡರಂಗ ಜನ ವಿಭಜನೆಯ ಆಡಳಿತ ನಡೆಸಿದೆ. ಜನರನ್ನು ಪರಸ್ಪರ ಕಚ್ಚಾಡುವಂತೆ ಮಾಡುವಲ್ಲಿ ಪ್ರತ್ಯೇಕ ಬ್ಯಾಂಕ್ ರಚಿಸುವ ಹುನ್ನಾರ ನಡೆಸಿದ್ದು, ಇದು ತೀವ್ರಗಾಮಿ ಪರಿಣಾಮ ಹೊಂದಿದ್ದು ಜಾಗೃತಿ ಅಗತ್ಯ ಎಂದರು. ಕೇಂದ್ರದ ಬಿಜೆಪಿ ಸಬ್ ಕಾ ಸಾಥ್, ಸಬ್ ಕ ವಿಕಾಸ್ ಘೋಷಣೆಯ ಮೂಲಕ ಸರ್ವರ ಹಿತ ಕಾಯುವ ಯೋಜನೆಯಿಂದ ಖ್ಯಾತಿಗಳಿಸಿದೆ ಎಂದರು. 

    ಇಂದು ರಾಷ್ಟ್ರದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಕೇರಳದಲ್ಲಿ ವರದಿಯಾಗಿದೆ. ರಾಷ್ಟ್ರದ ಬಹುತೇಕ ಕಡೆಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಆದರೆ ಭಾರತದಲ್ಲೇ ಅತ್ಯಧಿಕ ಜನಸಂಖ್ಯೆ ಇರುವ ಉತ್ತರಪ್ರದೇಶದಲ್ಲಿ ಕೋವಿಡ್ ಎರಡು ಸಾವಿರಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿದ್ದು, ಕೇಂದ್ರದ ನಿರ್ದೇಶಾನುಸಾರ ಇದು ಸಾಧ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಉತ್ತರಪ್ರದೇಶದ ಕೋವಿಡ್ ನಿಯಂತ್ರಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಕೇರಳದ ಎಡರಂಗ ಸರ್ಕಾರ ಏನು ಮಾಡುತ್ತಿದೆ ಎಂದು ಅವರು ಪ್ರಶ್ನಿಸಿದರು. 

    ಕೇಂದ್ರ ಸರ್ಕಾರದ ಯೋಜನೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿ, ಬಳಿಕ ಅದೇ ಯೋಜನೆಗಳನ್ನು ತನ್ನದೆಂದು ಬಿಂಬಿಸುವ ಮೂಲಕ ಪಿಣರಾಯಿ ವಿಜಯನ್ ಜನಸಾಮಾನ್ಯರಿಗೆ ಮಂಕುಬೂದಿ ಎರಚಲು ಪ್ರಯತ್ನಿಸಿದೆ ಆದರೆ ವಿದ್ಯಾಭ್ಯಾಸ ಸಹಿತ ಬುದ್ದಿಮತ್ತೆಯಲ್ಲಿ ಗಟ್ಟಿಗರಾದ ಕೇರಳಿಗರಿಗೆ ಸತ್ಯದ ಅರಿವು ಭದ್ರವಾಗಿರಬೇಕು. ಆಯುಷ್ಮಾನ್ ಭಾರತದಂತಹ ಕೇಂದ್ರದ ಜನಪ್ರಿಯ ಯೋಜನೆಗಳನ್ನೇ ಬುಡಮೇಲುಗೊಳಿಸಿದ ಎಡರಂಗ ಎಸಗಿರುವ ದ್ರೋಹಕ್ಕೆ ತಕ್ಕಪಾಠ ಈ ಬಾರಿ ಬಲವಾಗಿ ಮೂಡಬೇಕು. 

      ಶ್ರೀಶಂಕರರು ಮತ್ತು ನಾರಾಯಣ ಗುರುಗಳಂತಹ ಸಾಧಕರ ಪುಣ್ಯಭೂಮಿ ಬದಲಾಗಲಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.        

     ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಿಜೆಪಿ ನಾಯಕ, ಶಾಸಕ ಒ.ರಾಜಗೋಪಾಲ್, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ, ಕೇಂದ್ರ ಸಚಿವ ವಿ.ಮುರಳೀಧರನ್, ಮುಖಂಡರಾದ ಪಿ.ಕೆ.ಕೃಷ್ಣದಾಸ್, ಸಿ.ಕೆ.ಪದ್ಮನಾಭನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಜಯಯಾತ್ರೆಯ ಕನ್ವೀನರ್ ಎಂ.ಟಿ.ರಮೇಶ್, ಕಾರ್ಯದರ್ಶಿಗಳಾದ ಜೋರ್ಜ್ ಕುರ್ಯಾಕೋಸ್, ಪಿ.ಸುಧೀರ್, ಮುಖಂಡರಾದ ಸಿ.ಕೃಷ್ಣಕುಮಾರ್, ಎಂ.ಸಂಜೀವ ಶೆಟ್ಟಿ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಪ್ರಮೀಳಾ ಸಿ.ನಾಯ್ಕ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸದಾನಂದ ಮಾಸ್ತರ್, ಕೇರಳ ಕಾಂಗ್ರೆಸ್ಸ್ ನ ಪಿ.ಸಿ.ಥೋಮಸ್, ಜಿ.ರಾಮನ್ ನಾಯರ್, ಪ್ರಮೀಳಾ ದೇವಿ, ಪ್ರಪುಲ್ಲನ್, ನ್ಯಾಯವಾದಿ ನಿವೇದಿತಾ, ಎನ್.ಸಿ.ಪಿ.ಮುಖಂಡ ವಿಜೇಶ್, ಕುರುವಿಳ ಮ್ಯಾಥ್ಯು, ಕಾರ್ಕಳ ಶಾಸಕ ಸುನಿಲ್ ಕುಮಾರ್  ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸ್ವಾಗತಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಜಯ ಯಾತ್ರೆಯ ಕನ್ವೀನರ್ ಎಂ.ಟಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಯಾತ್ರೆಯ ಲಕ್ಷ್ಯಗಳ ಬಗ್ಗೆ ಮಾತನಾಡಿ, ನವ ಕೇರಳ ಸೃಷ್ಟಿಸುವ ಮೂಲಕ ಬಿಜೆಪಿಯು ಕೇರಳದ ಭ್ರಷ್ಟ, ಕೋಮು ವೈಷಮ್ಯದ ಚರಿತ್ರೆಯನ್ನು ತೊಡೆದು ಹಾಕಲಿದೆ ಎಂದರು. ರಾಜ್ಯದ 14 ಜಿಲ್ಲೆಗಳ ಮೂಲಕವೂ ಸಾಗುವ ವಿಜಯ ಯಾತ್ರೆ ಭಯ, ಗೊಂದಲ, ಕನಸುಗಳು ಕಮರಿದ ಕೇರಳದ ಜನತೆಗೆ ಭರವಸೆಯಾಗಲಿದೆ ಎಂದರು.  

    ಪ್ರಧಾನ ಭಾಷಣಗೈದ ರಾಜ್ಯ ಬಿಜೆಪಿ ಅಧ್ಯಕ್ಷ, ಯಾತ್ರೆಯ ನಾಯಕ ಕೆ.ಸುರೇಂದ್ರನ್ ಅವರು ಮಾತನಾಡಿ ಕೇರಳದಲ್ಲಿ ಕಳೆದ ಐದು ವರ್ಷಗಳ ಎಡಪಕ್ಷದ ದುರಾಡಳಿತ ಹಿಂದೆಂದೂ ಕಂಡಿರದ ಭ್ರಷ್ಟ, ಕೋಮುವಾದಿ ಆಡಳಿತದ ಮೂಲಕ ಓಟ್ ಬ್ಯಾಂಕ್ ರಾಜಕೀಯದಿಂದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ದೇವರ ಸ್ವಂತ ನೆಲವೆಂದೇ ಖ್ಯಾತವಾದ ಕೇರಳವನ್ನು ಇನ್ನಾದರೂ ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜನರಿಗೆ ಭರವಸೆಯಾಗಿ ಬಿಜೆಪಿ ಮುನ್ನಡೆಯಲಿದೆ ಎಂದರು.  

     ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ಕಾಸರಗೋಡು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡರು  ತೆಂಕು ಯಕ್ಷಗಾನ ಪುತ್ಥಳಿ, ಬಿಜೆಪಿ ನೇತಾರೆ ಶೋಭಾ ಸುರೇಂದ್ರನ್ ಅವರು ಜಾಗತಿಕ ಪ್ರಸಿದ್ದಿಯ  ಆರನ್ಮುಳ ಕನ್ನಡಿಯನ್ನು ವಿಶೇಷ ಕೊಡುಗೆಯಾಗಿ ನೀಡಲಾಯಿತು.  ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಪತ್ರಕರ್ತ ಸಂದೀಪ್ ವಾಚಸ್ಪತಿ ಬರೆದ ಕಮ್ಯುನಿಸ್ಟ್ ವಂಚನೆ ನೂರು ವರ್ಷಗಳು ಕೃತಿ(ಮಲೆಯಾಳ)ನ್ನು ಈ ಸಂದರ್ಭ ಯೋಗಿ ಆದಿತ್ಯನಾಥ್ ಬಿಡುಗಡೆಗೊಳಿಸಿದರು. ವಿಜಯ ಯಾತ್ರೆ ಮಾರ್ಚ್ 7 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.    

                                     ಅಲೆ ಎಬ್ಬಿಸಿದ ಟ್ವಿಟರ್ ಹ್ಯಾಶ್ ಟ್ಯಾಗ್!:

        ಬಿಜೆಪಿ ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ನೇತೃತ್ವದ ವಿಜಯಯಾತ್ರೆ ಉದ್ಘಾಟನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮನ ಟ್ವಿಟರ್‍ನಲ್ಲಿ ಅಲೆಗಳನ್ನು ಎಬ್ಬಿಸಿತು. ಯೋಗಿಯನ್ನು ಸ್ವಾಗತಿಸುವ ಹ್ಯಾಶ್‍ಟ್ಯಾಗ್ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ವಿಷಯವಾಗಿ ಗಮನ ಸೆಳೆಯಿತು.            ಬಿಜೆಪಿ ಕೇರಳ ಟ್ವೀಟ್ ಮಾಡಿದ # ಕೇರಳ ವೆಲ್ಕಮ್ಸ್ ಯೋಗಿಜಿ ಎಂಬ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಆಗಿದೆ.

         ಈ ಹಿಂದೆ ಯೋಗಿ ಆದಿತ್ಯನಾಥ್ ಅವರು ಸ್ವತಃ ಕೇರಳಕ್ಕೆ ಆಗಮಿಸುವ ಬಗ್ಗೆ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಉಂಟುಮಾಡಿತ್ತು. "ಕೇರಳಕ್ಕಾಗಿ ನನ್ನ ಪ್ರಾರ್ಥನೆ" ಎಂದು ಟ್ವೀಟ್ ಹೇಳಿದೆ. ಆದಿಶಂಕರ ಮತ್ತು ಶ್ರೀ ನಾರಾಯಣ ಗುರುಗಳ ಪವಿತ್ರ ಭೂಮಿಗೆ ಮರಳುವ ಅದೃಷ್ಟ ನನ್ನಲ್ಲಿದೆ. ಇಂದು ಪ್ರಾರಂಭವಾಗುವ ಯಶಸ್ಸಿನ ಪ್ರಯಾಣದಲ್ಲಿ ನಾನು ನಿಮ್ಮೊಂದಿಗೆ ಸೇರುತ್ತೇನೆ. ಜೈ ಶ್ರೀರಾಮ್ ಎಂಬ ಯೋಗಿ ಅವರ ಟ್ವೀಟ್ ಭಾರೀ ಪ್ರಶಂಸೆ ಮತ್ತು ಲೈಕ್ ಗೆ ಕಾರಣವಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries