ಕಾಸರಗೋಡು: ಹೊಸಮತದಾತರೂ ಸಹ ಚುನಾವಣೆ ಪ್ರಕ್ರಿಯೆಯ ಭಾಗವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನಸಭೆ ಚುನಾವಣೆಯ ಪೂರ್ವಭಾವಿಯಾಗಿ ಮತದಾತರ ಜಾಗೃತಿ ಚಟುವಟಿಕೆಗಳಾದ ಸ್ವೀಪ್ ನ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಪ್ರತಿ ಹೊಸ ಮತದಾತರೂ ಮತದಾನ ನಡೆಸಲೇಬೇಕು ಎಂಬ ಉದ್ದೇಶದೊಂದಿಗೆ ಸ್ವೀಪ್ ನ ಚಟುವಟಿಕೆಗಳನದನು ರಚಿಸಿ ಜಾರಿಗೊಳಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಅಂಗವಾಗಿ ಅಕ್ಷಯ ಯೂನಿಟ್ ಗಳ ಸಹಕಾರದೊಂದಿಗೆ 101 ನೂತನ ಮತದಾತರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಮತದಾತರನ್ನು ಆಕರ್ಪಿಸುವ ನಿಟ್ಟಿನಲ್ಲಿ ಸಿಗ್ನೀಚರ್ ಶಿಬಿರ, ಸೆಲ್ಪಿ ಕಾರ್ನರ್ ಗಳ ಉದ್ಘಾಟನೆ, ಮೈ ವೋಟ್ ಮೈ ಪ್ರೈಡ್ ಎಂಬ ಹಾಷ್ ಟಾಗ್ ನ ಬಿಡುಗಡೆ ಜರುಗಿತು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್ , ಐ.ಸಿ.ಡಿ.ಎಸ್. ಜಿಲ್ಲಾ ಸಂಚಾಲಕಿ ಕವಿತಾರಾಣಿ ರಂಜಿತ್ ಉಪಸ್ಥಿತರಿದ್ದರು.