ಕೊಚ್ಚಿ: ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಯುನಿಟಾಕ್ ಎಂಡಿ ಸಂತೋಷ್ ಈಪನ್ ರನ್ನು ಕಸ್ಟಮ್ಸ್ ಬಂಧಿಸಿದೆ. ಸಂತೋಷ್ ಈಪನ್ ಅವರನ್ನು ಇಂದು ಬೆಳಿಗ್ಗೆ ಕಸ್ಟಮ್ಸ್ ಕಚೇರಿಗೆ ಕರೆದು ಪ್ರಶ್ನಿಸಲಾಗಿತ್ತು. ಆ ಬಳಿಕ ಲಭ್ಯ ಪುರಾವೆಗಳ ಆಧಾರದಲ್ಲಿ ಬಂಧನ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಸಂತೋಷ್ ಈಪನ್ ಐದನೇ ಆರೋಪಿ.
ಸಂತೋಷ್ ಈಪನ್ ಯುನಿಟಾಕ್ ಕಂಪನಿಯ ಮಾಲೀಕರಾಗಿದ್ದು, ರಾಜ್ಯ ಸರ್ಕಾರ ನಿರ್ವಹಣೆಯ ವಸತಿ ಯೋಜನೆಯಾದ ಲೈಫ್ ಮಿಷನ್ ಯೋಜನೆಗೆ ನಿರ್ಮಾಣ ಒಪ್ಪಂದ ನಡೆಸಿತ್ತು. ಲೈಫ್ ಮಿಷನ್ ಲಂಚವನ್ನು ಡಾಲರ್‌ಗಳಾಗಿ ಪರಿವರ್ತಿಸುವಲ್ಲಿ ಸಂತೋಷ್ ಈಪನ್ ಭಾಗಿಯಾಗಿದ್ದಾರೆ ಎಂದು ಕಸ್ಟಮ್ಸ್ ಕಂಡುಹಿಡಿದಿದೆ. ಈ ಹಣವನ್ನು ಈಜಿಪ್ಟಿನ ಪ್ರಜೆಯಾದ ಖಾಲಿದ್‌ಗೆ ತಿರುವನಂತಪುರದ ಕೆಫೆಯೊಂದರಲ್ಲಿ ನೀಡಲಾಗಿದೆ ಎಂದು ತಿಳಿದುಬಂದಿದೆ.