ಕೊಚ್ಚಿ: ಆನ್‍ಲೈನ್ ರಮ್ಮಿ ಆಟವನ್ನು ಕಾನೂನುಬಾಹಿರ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೇರಳ ಗೇಮಿಂಗ್ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಅಧಿಸೂಚನೆ ಹೊರಡಿಸಲಾಗಿದೆ.
ಹಣಕ್ಕಾಗಿ ಆನ್‍ಲೈನ್ ರಮ್ಮಿ ಆಟಗಳನ್ನು ಜೂಜು ಎಂಬ ನೆಲೆಯಲ್ಲಿ ಪರಿಗಣಿಸಿರುವ ಸರ್ಕಾರ ಅಸ್ತಿತ್ವದಲ್ಲಿರುವ ಕಾನೂನನ್ನು ತಿದ್ದುಪಡಿ ಮಾಡಿದೆ.
ಈ ಹಿಂದೆ ರಾಜ್ಯದಲ್ಲಿ ಆನ್‍ಲೈನ್ ರಮ್ಮಿ ನಿಯಂತ್ರಣವನ್ನು ಕೋರಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗಿತ್ತು. ಆನ್‍ಲೈನ್ ಜೂಜಾಟವನ್ನು ನಿಯಂತ್ರಿಸಲು ಶಾಸನ ಕೋರಿ ತ್ರಿಶೂರ್ ಮೂಲದ ಪೌಲಿ ವಡಕ್ಕನ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.