ಬದಿಯಡ್ಕ: ಕಾಲಡಿಯ ಶ್ರೀ ಶಂಕರಾಚಾರ್ಯ ವಿಶ್ವವಿದ್ಯಾನಿಲಯದ ಪಯ್ಯನ್ನೂರು ಪ್ರಾದೇಶಿಕ ಕೇಂದ್ರ ಡಿಪಾಟ್ಮೆರ್ಂಟ್ ಆಫ್ ಸೋಶಿಯಲ್ ವರ್ಕ್ ತೆಲಿಕೆ ನಲಿಕೆ ಸಮುದಾಯ ಶಿಬಿರ ಪೆರಡಾಲ ಕೊರಗ ಕಾಲನಿ ಕೇಂದ್ರೀಕರಿಸಿ ಹತ್ತು ದಿವಸಗಳ ಕಾಲ ನಡೆಯಲಿರುವುದು.
ಇದರ ಉದ್ಘಾಟನಾ ಸಮಾರಂಭವು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಸಂಜೆ ಜರಗಿತು. ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ ಅಬ್ಬಾಸ್ ಉದ್ಘಾಟಿಸಿ ಮಾತನಾಡಿ ಕೊರಗ ವಿಭಾಗವು ಸಮಾಜ ದಿಂದ ಬೇರ್ಪಡಿಸಿದ ವಿಭಾಗವಾಗಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಈ ವಿದ್ಯಾರ್ಥಿಗಳಿಂದ ನಡೆಯಬೇಕಾಗಿದೆ ಅವರಲ್ಲಿ ಸಾಮಾಜಿಕ ಬದ್ಧತೆ, ಶುಚಿತ್ವ ದ ಬಗ್ಗೆ ಜನ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ವಾರ್ಡ್ ಸದಸ್ಯ ಕೆ ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು, ಡಿಪಾಟ್ಮೆರ್ಂಟ್ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಅನಿತಾ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಪಂಚಾಯತಿ ಸದಸ್ಯೆ ಅಶ್ವಿನಿ ಭಟ್, ಮುಖ್ಯೋಪಾಧ್ಯಾಯಿನಿ ತಂಗಮಣಿ, ಪಿಟಿಎ ಅಧ್ಯಕ್ಷ ಅಶ್ರಫ್ ಮುಣಿಯೂರ್, ಸಂಘಟಕ ಸಮಿತಿ ಕೋಶಧಿಕಾರಿ ಶಾಫಿ ಚೂರಿಪಳ್ಳ, ಸಂಚಾಲಕ ನಿರಂಜನ್ ರೈ ಪೆರಡಾಲ, ಡಿಪಾಟ್ಮೆರ್ಂಟ್ ವಿಭಾಗದ ಅಧ್ಯಾಪಕ ಸುನಿಲ್, ಪೆರಡಾಲ ಎಂ.ಜಿ.ಎಲ್. ಸಿ ಅಧ್ಯಾಪಕ ಬಾಲಕೃಷ್ಣ ಅಚ್ಛಾಯಿ, ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಸಂಘಟನ ಸಮಿತಿಯ ಅಧ್ಯಕ್ಷ ಮಾಯಿನ್ ಕೇಳೊಟ್ ಸ್ವಾಗತಿಸಿ, ಶಿಬಿರದ ಸಂಚಾಲಕ ಕುಮಾರಿ ಅನಿತಾ ಜೋಷ್ ವಂದಿಸಿದರು, ಸಹಸಂಚಾಲಕ ರಾಜೇಶ್ ಮಾಸ್ಟರ್ ಅಗಲ್ಪಾಡಿ ಸಹಕರಿಸಿದರು.