ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ.ಯ ಪ್ರತಿಪಕ್ಷ ಕಾರ್ಮಿಕ ಸಂಘಗಳು ನಾಳೆ(ಮಂಗಳವಾರ) ಸೂಚನಾ ಮುಷ್ಕರ ನಡೆಸಲಿವೆ. ವೇತನ ಸುಧಾರಣೆ ಸೇರಿದಂತೆ ಬೇಡಿಕೆಗಳ ಹಿನ್ನಡೆಯ ಮಧ್ಯೆ ಮುಷ್ಕರ ಘೋಶಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಎಂಡಿ ಬಿಜು ಪ್ರಭಾಕರ್ ಅವರೊಂದಿಗೆ ಪ್ರತಿಪಕ್ಷ ಕಾರ್ಮಿಕ ಸಂಘಗಳು ನಿನ್ನೆ ಸಭೆ ನಡೆಸಿದ್ದವು. ಆದರೆ ಇದು ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರದೊಂದಿಗೆ ಮುಂದುವರಿಯಲು ಯೂನಿಯನ್ ನಿರ್ಧರಿಸಿತು.
ಸ್ವತಂತ್ರ ಕಂಪನಿಯಾದ ಸ್ವಿಫ್ಟ್ ರಚನೆಗೆ ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಒಕ್ಕೂಟಗಳು ವಿರೋಧಿಸುತ್ತಿವೆ. ಇದೇ ವೇಳೆ ಮುಷ್ಕರವು ರಾಜಕೀಯ ಪ್ರೇರಿತವಾಗಿದೆ ಎಂದು ಸರ್ಕಾರಿ ಪರ ಕೆ.ಎಸ್.ಆರ್.ಟಿ.ಇ.ಎ ಸಂಘಟನೆ ಆರೋಪಿಸಿದೆ.