ಬದಿಯಡ್ಕ: ವೃಂದಾವನಸ್ಥರಾದ ಎಡನೀರು ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರ ತಿಂಗಳ ಆರಾಧನಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ವಿದುಷಿ ಉಷಾ ಈಶ್ವರ ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.
ಹಿಮ್ಮೇಳದಲ್ಲಿ ಗೋವಿಂದ ಪ್ರಸಾದ್ ಪಯ್ಯನ್ನೂರು, ಪ್ರಭಾಕರ ಕುಂಜಾರು, ಈಶ್ವರ ಭಟ್ ಕಾಸರಗೋಡು, ರಾಜೀವನ್ ವೆಳ್ಳಿಕ್ಕೋತ್ ಸಹಕರಿಸಿದರು. ಎಡನೀರು ಮಠಾಪತಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರು ಆಶೀರ್ವಾದ ಮಂತ್ರಾಕ್ಷತೆಗಳನ್ನು ನೀಡಿ ಹರಸಿದರು.