ತಿರುವನಂತಪುರ: ಕುಂಭಮಾಸ ಪೂಜೆಗೆ ಪ್ರತಿದಿನ ಕೇವಲ 5000 ಜನರಿಗೆ ಮಾತ್ರ ಶಬರಿಮಲೆ ಭೇಟಿಗೆ ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ. ಕೋವಿಡ್ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ದರ್ಶನಕ್ಕಾಗಿ ಭಕ್ತರ ಸಂಖ್ಯೆ ಸೀಮಿತಗೊಳಿಸಲಾಗಿದೆ.
ಪ್ರತಿದಿನ 15 ಸಾವಿರ ಜನರಿಗೆ ಶಬರಿಮಲೆಗೆ ಭೇಟಿ ನೀಡಲು ಅವಕಾಶ ನೀಡಬೇಕೆಂದು ತಿರುವಾಂಕೂರು ದೇವಸ್ವಂ ಮಂಡಳಿ ಒತ್ತಾಯಿಸಿತ್ತು. ಈ ಬಗ್ಗೆ ದೇವಸ್ವಂ ಮಂಡಳಿ ಸರ್ಕಾರಕ್ಕೆ ಪತ್ರ ಬರೆದಿತ್ತು.
ಕೋವಿಡ್ ಹಿನ್ನೆಲೆಯ ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ನಿರ್ಧಾರ ತೆಗೆದುಕೊಳ್ಳುವಂತೆ ದೇವಸ್ವಂ ಇಲಾಖೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿಂದೆ ಹೈಕೋರ್ಟ್ 5,000 ಜನರಿಗೆ ಮಾಸಪೂಜೆ ವಿಧಿವಿಧಾನಗಳಿಗೆ ಭೇಟಿ ನೀಡಲು ಅವಕಾಶ ನೀಡಿತ್ತು.