ತಿರುವನಂತಪುರ: ಪಡಿತರ ಚೀಟಿ ಅರ್ಜಿದಾರರಿಗೆ ಸ್ವಯಂ ಮುದ್ರಿತ ಎಲೆಕ್ಟ್ರಾನಿಕ್ ಪಡಿತರ ಚೀಟಿ ಯೋಜನೆಯನ್ನು ಶುಕ್ರವಾರ ಉದ್ಘಾಟಿಸಲಾಗುವುದು.
ಸಚಿವ ಪಿ. ತಿಲೋಥಮನ್ ಇ-ರೇಷನ್ ಕಾರ್ಡ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಶುಕ್ರವಾದಿಂದ ಇ-ರೇಷನ್ ಕಾರ್ಡ್ ನ್ನು ಇ-ಆಧಾರ್ ರೂಪದಲ್ಲಿ ಮುದ್ರಿಸಬಹುದು ಮತ್ತು ಬಳಸಬಹುದು.
ಆನ್‍ಲೈನ್ ಅರ್ಜಿಯನ್ನು ತಾಲ್ಲೂಕು ಸರಬರಾಜು ಅಧಿಕಾರಿ ಅನುಮೋದಿಸಿದ ಬಳಿಕ ಪಿಡಿಎಫ್ ರೂಪದಲ್ಲಿ ಇ-ರೇಷನ್ ಕಾರ್ಡ್ ನ್ನು ಅಕ್ಷಯ ಕೇಂದ್ರಗಳಿಂದ ಲಾಗಿನ್ ಅಥವಾ ಅರ್ಜಿದಾರರ ನಾಗರಿಕ ಲಾಗಿನ್ ನಿಂದ ಪಡೆಯಬಹುದು. ಪಿಡಿಎಫ್ ಆಗಿ ಲಭ್ಯವಿರುವ ಇ-ರೇಷನ್ ಕಾರ್ಡ್ ತೆರೆದುಕೊಳ್ಳಲು ಪಾಸ್ವರ್ಡ್ ನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಲಾದ ಮೊಬೈಲ್ ಪೋನ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ಕಳುಹಿಸಲಾಗುತ್ತದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಇ-ಪಡಿತರ ಕಾರ್ಡ್‍ಗೆ ತಾಂತ್ರಿಕ ನೆರವು ನೀಡಿದೆ.
ಅಕ್ಷಯ ಲಾಗಿನ್ ಅಥವಾ ಸಿಟಿಜನ್ ಲಾಗಿನ್ ಮೂಲಕ ನೀವು ಆನ್ ಲೈನ್‍ನಲ್ಲಿ ಪಡಿತರ ಚೀಟಿಗಾಗಿ http://civilsupplieskerala.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಇ-ಖಜಾನೆ ವ್ಯವಸ್ಥೆಯ ಮೂಲಕ ಶುಲ್ಕವನ್ನು ಪಾವತಿಸಬಹುದು.