ಕಾಸರಗೋಡು: ಪೆರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಸುಮಾರು 99 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಶಾಸಕ ಕೆ.ಕುಞÂರಾಮನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಬ್ಲೋಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಫಾತಿಮತ್ ಷಂನಾ, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಸದಸ್ಯೆ ವಿ.ವಿ.ಸುಮಾ, ಸಾರವಜನಿಕ ಶಿಕ್ಷಣಸಂರಕ್ಷಣೆ ಯಜ್ಞ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪಿ.ಎಂ.ಸತ್ಯನ್ ಸ್ವಾಗತಿಸಿದರು. ಸೀನಿಯರ್ ಅಸಿಸ್ಟೆಂಟ್ ಕೆ.ಕೆ.ಶ್ಯಾಮಲಾ ವಂದಿಸಿದರು.
ಅಸೆಂಬ್ಲಿ ಸಭಾಂಗಣ ಉದ್ಘಾಟನೆ:
ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಅಂಗವಾಗಿ ಕಾಞಂಗಾಡ್ ನಗರಸಭೆಯ ಪೂಂಜಾವಿ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಅಸೆಂಬ್ಲಿ ಸಭಾಂಗಣ ಸೋಮವಾರ ಉದ್ಘಾಟನೆಗೊಂಡಿತು.ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲ, ಸದಸ್ಯರಾದ ನೆಜ್ಮಾ ರಾಫಿ. ಫೌಸಿಯಾ ಶರೀಫ್, ಟಿ.ಬಾಲಕೃಷ್ಣನ್, ಜಿಲ್ಲಾ
ಶಿಕ್ಷಣ ಉಪನಿರ್ದೇಶಕಿ ಕೆ.ವಿ. ಪುಷ್ಪಾ ಉಪಸ್ಥಿತರಿದ್ದರು.