ನವದೆಹಲಿ: "ಇದು ಅಮೆರಿಕಾದ ಸುಪ್ರೀಂ ಕೋರ್ಟ್ ಅಲ್ಲ, ನ್ಯಾಯಾಧೀಶರನ್ನು 'ಯುವರ್ ಆನರ್' ಎಂದು ಸಂಬೋಧಿಸುವುದು ಬೇಡ" ಕಾನೂನು ವಿದ್ಯಾರ್ಥಿಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ.
"ನೀವು ನಮ್ಮನ್ನು 'ಯುವರ್ ಆನರ್' ಎಂದು ಕರೆದಾಗ ನೀವು ಅಮೆರಿಕಾದ ಸುಪ್ರೀಂ ಕೋರ್ಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೀರಿ ಎಂದು ತೋರುತ್ತದೆ" ಎಂದು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠ ಕಾನೂನು ವಿದ್ಯಾರ್ಥಿಗೆ ತಿಳಿಸಿದೆ.
ಅಗ ಕಾನೂನು ವಿದ್ಯಾರ್ಥಿ ತಕ್ಷಣ ನ್ಯಾಯಪೀಠಕ್ಕೆ ಕ್ಷಮೆಯಾಚಿಸಿದರು ಮತ್ತು ನ್ಯಾಯಾಲಯವನ್ನು "ಯುವರ್ ಲಾರ್ಡ್‌ಶಿಪ್" ಎಂದು ಸಂಬೋಧಿಸುವುದಾಗಿ ಹೇಳಿದರು. ಇದಕ್ಕೆ ಸಿಜೆಐ ಬೊಬ್ಡೆ "ಏನೇ ಇರಲಿ, ಆದರೆ ಸೂಕ್ತವಲ್ಲದ ಪದಗಳನ್ನು ಬಳಸಬೇಡಿ".ಎಂದಿದ್ದಾರೆ.
ಅಮೆರಿಕಾ ಸುಪ್ರೀಂ ಕೋರ್ಟ್ ಮತ್ತು ಮ್ಯಾಜಿಸ್ಟೀರಿಯಲ್ ನ್ಯಾಯಾಲಯದಲ್ಲಿ ನ್ಯಾಯಾಲಯವನ್ನು 'ಯುವರ್ ಆನರ್'ಎಂದು ಸಂಬೋಧಿಸಬಹುದು ಆದರೆ ಭಾರತೀಯ ಸುಪ್ರೀಂ ಕೋರ್ಟ್ ನಲ್ಲಿ ಅಲ್ಲಎಂದು ನ್ಯಾಯಪೀಠ ಅವರಿಗೆ ತಿಳಿಸಿದೆ.
ನಂತರ ನ್ಯಾಯಪೀಠವು ಅವರ ಪ್ರಕರಣವೇನು ಎಂದು ಕೇಳಲು ವೈಯಕ್ತಿಕವಾಗಿ ಹಾಜರಾದ ವಿದ್ಯಾರ್ಥಿ, ಕ್ರಿಮಿನಲ್ ನ್ಯಾಯವ್ಯಾಪ್ತಿಯಲ್ಲಿ ನ್ಯಾಯಾಂಗದ ಮೂಲಸೌಕರ್ಯವನ್ನು ಬಲಪಡಿಸಬೇಕೆಂದು ತಾವು ಬಯಸುವುದಾಗಿ ಹೇಳಿದ್ದಾರೆ. ನ್ಯಾಯಪೀಠದ ಮೂಲಸೌಕರ್ಯವನ್ನು ಹಂತ ಹಂತವಾಗಿ ಅಧೀನಕ್ಕೆ ತರುವವರೆಗೆ ನ್ಯಾಯಾಂಗದ ಮೂಲಸೌಕರ್ಯಗಳನ್ನು ಬಲಪಡಿಸಲು ನಿರ್ದೇಶನಗ ಜಾರಿಯಲ್ಲಿದೆ, ಈ ವಿಚಾರದಲ್ಲಿ ಇದಾಗಲೇ ಒಂದು ಅರ್ಜಿ ಬಾಕಿ ಇದೆ ಎಂದು ನ್ಯಾಯಪೀಠ ಅವರಿಗೆ ತಿಳಿಸಿದೆ. ವಿಚಾರಣೆ ನಾಲ್ಕು ವಾರಗಳ ಕಾಲ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.