ಕಾಸರಗೋಡು: ಕರ್ನಾಟಕದೊಂದಿಗಿನ ಕೇರಳ ಗಡಿಯನ್ನು ಮುಚ್ಚಿದ್ದನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸಮರ್ಥಿಸಿದ್ದಾರೆ. ಎಲ್ಲಾ ರಾಜ್ಯಗಳು ತಮ್ಮದೇ ಆದ ಭದ್ರತೆಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬ ವಿವರಣೆ ನೀಡಿದ್ದಾರೆ. ಕಾಸರಗೋಡು ಗಡಿಯಲ್ಲಿ ನಾಲ್ಕು ರಸ್ತೆಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಕರ್ನಾಟಕ ನಿನ್ನೆಯಿಂದ ಮುಚ್ಚಿದೆ.
72 ಗಂಟೆಗಳ ಒಳಗೆ ತೆಗೆದುಕೊಂಡ ಕೋವಿಡ್ ಋಣಾತ್ಮಕ ವರದಿಯನ್ನು ಬಸ್ ಪ್ರಯಾಣಿಕರಿಗೂ ಕಡ್ಡಾಯಗೊಳಿಸಲಾಗಿದೆ. ವಯನಾಡ್ ಬಾವಲಿ ಚೆಕ್ ಪೆÇೀಸ್ಟ್ನಲ್ಲಿ ಕೇರಳ ವಾಹನಗಳನ್ನು ನಿರ್ಬಂಧಿಸಿರುವುದು ವಿವಾದ ಮತ್ತು ಸಂಚಾರ ದಟ್ಟಣೆಗೆ ಕಾರಣವಾಯಿತು. ಇಂದಿನಿಂದ ಆರ್.ಟಿ.ಪಿ.ಸಿ.ಆರ್ ಪ್ರಮಾಣಪತ್ರ ಕಡ್ಡಾಯ ಎಂದು ಕರ್ನಾಟಕ ಪ್ರಕಟಿಸಿದೆ.