ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ನೇತೃತ್ವದಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆರನೇ ಹಾಗು ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕೋಟೆಕಣಿಯ ಅಕ್ಷಯ ಕುಮಾರ್ ಅವರನ್ನು ಅವರ ಮನೆಯಲ್ಲಿ ಅಭಿನಂದಿಸಲಾಯಿತು.
ಹಿರಿಯ ಉದ್ಯಮಿ ನಿರಂಜನ ಕೊರಕೋಡು, ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಅವರು ಶಾಲು ಹೊದಿಸಿ, ಹಾರ, ಸ್ಮರಣಿಕೆ, ಹಣ್ಣುಹಂಪಲು, ಪುಸ್ತಕಗಳನ್ನು ನೀಡಿ ಅಭಿನಂದಿಸಿದರು.