ತಿರುವನಂತಪುರ: ಮುಖ್ಯಮಂತ್ರಿಯ ಸಲಹೆಗಾರರ ಸೇವಾವಧಿ ಕೊನೆಗೊಂಡಿದೆ. ಪೋಲೀಸ್ ಹಾಗೂ ಮಾಧ್ಯಮ ಸಲಹೆಗಾರರ ಸೇವೆ ಮಾ.1 ರಂದು ಕೊನೆಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನ ಕಾರ್ಯದರ್ಶಿ ಕೆ.ಆರ್.ಜೋತಿಲಾಲ್ ಈ ಆದೇಶ ಹೊರಡಿಸಿದ್ದಾರೆ. ಮಾಧ್ಯಮ ಸಲಹೆಗಾರ ಜಾನ್ ಬ್ರಿಟ್ಟಾಸ್ ಮತ್ತು ಪೋಲೀಸ್ ಸಲಹೆಗಾರ ರಮಣನ್ ಶ್ರೀವಾಸ್ತವ ಅವರ ಸೇವೆಗಳನ್ನು ಅಮಾನತುಗೊಳಿಸುವ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಅವಧಿ ಮುಗಿಯುತ್ತಿರುವ ಸಂದರ್ಭದಲ್ಲಿ ಸಲಹೆಗಾರರ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಸಾರ್ವಜನಿಕ ಆಡಳಿತ ಇಲಾಖೆ ವಿವರಿಸಿದೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಾಧ್ಯಮ ಸಲಹೆಗಾರರಾಗಿ ಜಾನ್ ಬ್ರಿಟ್ಟಾಸ್ ಅವರನ್ನು ನೇಮಿಸಲಾಗಿತ್ತು. ಬ್ರಿಟ್ಟಾಸ್ ಸಿ.ಪಿ.ಎಂ. ಸುದ್ದಿ ವಾಹಿನಿಯಾದ ಕೈರಳಿಯ ಎಂ.ಡಿ. ಆಗಿದ್ದರು.
1973 ರ ಬ್ಯಾಚ್ ಕೇರಳ ಕೇಡರ್ ಐಪಿಎಸ್ ಅಧಿಕಾರಿ ರಮಣನ್ ಶ್ರೀವಾಸ್ತವ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಶ್ರೀವಾಸ್ತವ ಅವರ ನೇಮಕ ಸಿಪಿಎಂನಲ್ಲಿ ವಿವಾದಕ್ಕೆ ನಾಂದಿ ಹಾಡಿತ್ತು. ಇಸ್ರೋ ಹಗರಣದ ಹಿನ್ನೆಲೆಯಲ್ಲಿ ಅಸೆಂಬ್ಲಿಯಲ್ಲಿ ಪಿಣರಾಯಿ ವಿಜಯನ್ ಅವರ ಭಾಷಣವನ್ನು ಸಿಪಿಎಂ ನಾಯಕರ ಒಂದು ಭಾಗ ಟೀಕಿಸಿತ್ತು, ಶ್ರೀವಾಸ್ತವ ಅವರ ಬಗ್ಗೆ ಕರುಣಾಕರನ್ ಅವರು ದೇಶದ್ರೋಹಿ ಚಟುವಟಿಕೆಗಳ ನಿಷ್ಠಾವಂತ ಐಜಿ ಎಂದು ಹೇಳಿದ್ದರು. 1991 ರ ಡಿಸೆಂಬರ್ 15 ರಂದು ಪಾಲಕ್ಕಾಡ್ ಪೋಲೀಸರು ಸಿರಾಜುನ್ನಿಸಾ ಎಂಬ 11 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಂದ ಸಂದರ್ಭ ರಮಣನ್ ಶ್ರೀವಾಸ್ತವ ಇದರ ಹಿಂದಿನ ರೂವಾರಿ ಎಂದೇ ಆರೋಪಿಸಲಾಗಿತ್ತು. ಖಾಸಗಿ ಹಣಕಾಸು ಸಂಸ್ಥೆಯ ಭದ್ರತಾ ಸಲಹೆಗಾರರೂ ಆಗಿರುವ ಶ್ರೀವಾಸ್ತವ ಅವರನ್ನು ವಜಾಗೊಳಿಸಬೇಕು ಎಂಬ ಸಿಪಿಎಂ ನಾಯಕರ ಬೇಡಿಕೆಯನ್ನು ಸಿಎಂ ತಿರಸ್ಕರಿಸಿದ್ದರು.
ಸೈಬರ್ ದಾಳಿಯನ್ನು ತಡೆಗಟ್ಟಲು ಪಿಣರಾಯಿ ಸರ್ಕಾರ ತಂದಿರುವ ಪೋಲೀಸ್ ಕಾಯ್ದೆಯ ತಿದ್ದುಪಡಿಯ ವಿವಾದದ ಹಿಂದೆ ರಮಣನ್ ಶ್ರೀವಾಸ್ತವ ಅವರ ಸಲಹೆಯಿತ್ತು ಎನ್ನಲಾಗುತ್ತಿದೆ. ಕಾನೂನಿನ ವಿವಾದಗಳ ಹೊರತಾಗಿಯೂ, ರಮಣನ್ ಶ್ರೀವಾಸ್ತವ ಅವರನ್ನು ರಕ್ಷಿಸಲು ಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿದ್ದರು. ಕೈರಳಿ ಟಿವಿಯ ಎಂಡಿ ಆಗಿ ಮುಂದುವರಿಯುವುದಾಗಿ ಬ್ರಿಟ್ಟಾಸ್ ಘೋಷಿಸಿದ್ದರೂ, ರಮಣನ್ ಶ್ರೀವಾಸ್ತವ ಮುಂದಿನ ದಿನಗಲಲ್ಲಿ ಏನು ಮಾಡಲಿದ್ದಾರೆಂದು ಸ್ಪಷ್ಟವಾಗಿಲ್ಲ.