ಕೊಟ್ಟಾಯಂ: ಧಾರ್ಮಿಕ-ರಾಜಕೀಯ ಮೈತ್ರಿಯನ್ನು ಬಲಪಡಿಸಲು ಕಾಂಗ್ರೆಸ್ ನಾಯಕತ್ವ ಪಾಣಕ್ಕಾಡ್ ಗೆ ತೆರಳಿತು ಎಂಬ ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ವಿಜಯರಾಘವನ್ ಹೇಳಿಕೆಗೆ ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಪ್ರತಿಕ್ರಿಯಿಸಿದ್ದು, ವಿಜಯರಾಘವನ್ ಲೀಗ್ ವಿರುದ್ಧದ ಹೇಳಿಕೆಗಳು ಎಲ್.ಡಿ.ಎಫ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂತಹ ಪ್ರತಿಕ್ರಿಯೆಗಳು ಅಗತ್ಯವೇ ಎಂದು ನಿರ್ಧರಿಸುವುದು ವಿಜಯರಾಘವನ್ ಅವರದ್ದು ಎಂದಿರುವರು.
ಎಲ್ಡಿಎಫ್ ಜಾತ್ಯತೀತತೆಯನ್ನು ಅಳವಡಿಸಿಕೊಂಡ ಪಕ್ಷ. ಯುಡಿಎಫ್ವೇ ಧರ್ಮವನ್ನು ರಾಜಕೀಯಕ್ಕೆ ಥಳುಕು ಹಾಕಲು ಸದಾ ಹಾತೊರೆಯುತ್ತದೆ ಎಂದು ಅವರು ಹೇಳಿದರು. ಜನರನ್ನು ಮೋಸಗೊಳಿಸಲು ಶಬರಿಮಲೆ ವಿವಾದವನ್ನು ಯುಡಿಎಫ್ ಅಭಿಯಾನದಲ್ಲಿ ಬಳಸುತ್ತಿದೆ. ಶಬರಿಮಲೆ ವಿವಾದ ನ್ಯಾಯಾಲಯವು ಪರಿಗಣಿಸಬೇಕಾದ ವಿಷಯವಾಗಿದೆ ಎಂದಿರುವರು. ಇದೇ ವೇಳೆ ಎಡರಂಗದಲ್ಲಿ ಈವರೆಗೆ ಚುನಾವಣಾ ಸಂಬಂಧಿ ಸ್ಥಾನ ಹಂಚಿಕೆ ಚರ್ಚೆ ಪ್ರಾರಂಭವಾಗಿಲ್ಲ ಮತ್ತು ತಾನು ಸ್ಪರ್ಧಿಸುವುದಿಲ್ಲ ಎಂದು ಕಾನಂ ಸ್ಪಷ್ಟಪಡಿಸಿದರು.