ಕುಂಬಳೆ: ಇಂಗ್ಲೀಷ್, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಎ.ನರಸಿಂಹ ಭಟ್ ಅವರು ಭಾಷಾಂತರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಗಿರೀಶ್ ಭಟ್ ಅಜಕ್ಕಳ ಅವರು ಹೇಳಿದರು.
ಅವರು ಕಾಸರಗೋಡಿನ ಹಿರಿಯ ಭಾಷಾಂತರಕಾರ ಎ.ನರಸಿಂಹ ಭಟ್ ಅವರಿಗೆ ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 2020 ನೇ ಸಾಲಿನಲ್ಲಿ ಕೊಡಮಾಡಿರುವ ಪ್ರಶಸ್ತಿ ಫಲಕವನ್ನು ಅವರ ಸ್ವಗೃಹವನ್ನು ಇತ್ತೀಚೆಗೆ ಸಂದರ್ಶಿಸಿ ಪ್ರದಾನಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಸರಗೋಡಿನ ಇನ್ನೋರ್ವ ಹಿರಿಯ ಲೇಖಕ ಬಿ.ನರಸಿಂಗ ರಾವ್ ಅವರ ಮಲಯಾಳಂ ಅನುವಾದ ಕೃತಿಗೆ 2020 ನೇ ಸಾಲಿನ ಭಾಷಾಂತರ ಪುರಸ್ಕಾರ ನೀಡಲಾಯಿತು.
ಅಕಾಡೆಮಿಯ ಅಧ್ಯಕ್ಷ ಡಾ.ಗಿರೀಶ್ ಭಟ್ ಅಜಕ್ಕಳ, ಸದಸ್ಯರಾದ ಡಾ.ಮಾಧವ ಪೆರಾಜೆ ಹಾಗು ದಯಾನಂದ ಪೆರಾಜೆ ಶಾಲು ಹೊದಿಸಿ ಫಲಪುಷ್ಪವನ್ನಿತ್ತು ಗೌರವಿಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ರತ್ನಾಕರ ಮಲ್ಲಮೂಲೆ, ಕಸಾಪ ಅಧ್ಯಕ್ಷ ಎಸ್.ವಿ.ಭಟ್, ವಿಷ್ಣು ಶ್ಯಾನುಭೋಗ್, ಕೆ.ಜಗದೀಶ್ ಕೂಡ್ಲು, ಗುರುಪ್ರಸಾದ್ ಕೋಟೆಕಣಿ, ಕೃಷ್ಣಪ್ರಸಾದ್ ಕೋಟೆಕಣಿ, ಉಷಾ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.