ಕುಂಬಳೆ: ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮುನ್ನಡೆಸುವ ವಿಜಯ ಯಾತ್ರೆಯ ಪೂರ್ವಭಾವಿಯಾಗಿ ಕುಂಬಳೆ ಪಂಚಾಯತಿ 149 ನೇ ಬೂತಿನ ಧ್ವಜ ದಿನವನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಿಸರದಲ್ಲಿ ಮಂಗಳವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂಬಳೆ ಬಿಜೆಪಿ ಅಧ್ಯಕ್ಷ ಕೆ ಸುಧಾಕರ ಕಾಮತ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿನೋದನ್,ಒಬಿಸಿ ಮಾರ್ಚ್ ಜಿಲ್ಲಾ ಸಮಿತಿ ಸದಸ್ಯ ಶಶಿ ಕುಂಬ್ಳೆ,ಪಂಚಾಯತಿ ಸದಸ್ಯರಾದ ವಿವೇಕಾನಂದ ಶೆಟ್ಟಿ, ಸುಬ್ರಮಣ್ಯ ನಾಯಕ್ ಉಪಸ್ಥಿತರಿದ್ದರು. ಯುವಮೋರ್ಚ ಕುಂಬಳೆ ಘಟಕದ ಕಾರ್ಯದರ್ಶಿ ರಾಜೇಶ್ ಸ್ವಾಗತಿಸಿ, ಸುಚಿಂದ್ರನಾಥ ವಂದಿಸಿದರು.