ನವದೆಹಲಿ: ದೇಶದ ಪ್ರಮುಖ ಟೆಲಿ ಕಮ್ಯುನಿಕೇಷನ್ ಕಂಪನಿಗಳಾದ ಜಿಯೋ, ವಿಐ ಮತ್ತು ಏರ್ ಟೆಲ್ ಕಂಪನಿಗಳು ಶೀಘ್ರದಲ್ಲೇ ಇ-ಸಿಮ್ ಜಾರಿಗೆ ತರಲಿವೆ.
ಯಾವುದೇ ಆಯಂಡ್ರಾಯ್ಡ್ ಮೊಬೈಲ್ ಗಳಲ್ಲಿ ಇ-ಸಿಮ್ ಅಥವಾ ಎಂಬೆಡೆಡ್ ಸಿಮ್ ಅಳವಡಿಸುವ ಮಾದರಿಯ ಸಿಮ್ ಗಳನ್ನು ನೀಡಲು ಉದ್ದೇಶಿಸಿದೆ. ಈ ಮೂಲಕ ಸಿಮ್ ಅನ್ನು ಮೊಬೈಲ್ ಹಾಕುವ ಅವಶ್ಯಕತೆ ಇರುವುದಿಲ್ಲ.
ಇ-ಸಿಮ್ ಬಳಕೆದಾರರು ಮೊಬೈಲ್ ನಲ್ಲಿ ಸಿಮ್ ಹಾಕಲು ಬಳಸುವ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಬಹುದು ಉದಾಹರಣೆಗೆ ಸ್ಟೋರೇಜ್ ಹೆಚ್ಚಿಸಿಕೊಳ್ಳಲು ಬಳಸಬಹುದು. ಅಲ್ಲದೇ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವಾಗ ಸಿಮ್ ಬದಲಿಸುವ ಅಥವಾ ಆಫರ್ ಬದಲಿಸುವಾಗ ಸಿಮ್ ಬದಲಿಸುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಟೋಲ್ ನಂಬರ್ ಗೆ ಕರೆ ಮಾಡಿ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದು ಎನ್ನಲಾಗಿದೆ.