ತಿರುವನಂತಪುರ: ಕೊರೋನಾ ತಡೆಗಟ್ಟುವಲ್ಲಿ ಕೇರಳ ವಿಫಲವಾಗಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪುನರುಚ್ಚರಿಸಿರುವರು. ಕೇರಳದಲ್ಲಿ ದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಆದರೆ, ಇದನ್ನು ಗಮನಿಸಿ ಕೊರೊನಾ ನಿಯಂತ್ರಣದಲ್ಲಿ ಕೇರಳ ವಿಫಲವಾಗಿದೆ ಎಂದು ಹೇಳಲಾಗುವುದಿಲ್ಲ ಎಂದು ಸಚಿವೆ ಹೇಳಿದರು.
ಕೊರೊನಾ ನಿಯಂತ್ರಣ ಕ್ರಮಗಳಿಗಾಗಿ ರಾಜ್ಯ ಪಡೆದ ಪ್ರಶಸ್ತಿಗಳು ಮತ್ತು ಅಭಿನಂದನೆಗಳು ಯಾರಿಂದಲೂ ಖರೀದಿಸಲ್ಪಟ್ಟಿಲ್ಲ ಎಂದು ಸಚಿವರು ಹೇಳಿದರು. ಅಭಿನಂದನೆಗಳು ಲಭಿಸಿವೆ ಎಂದರೆ ಎಲ್ಲವನ್ನೂ ಪರಿಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಕೊರೋನಾ ಸಾಂಕ್ರಾಮಿಕ ಎಂಬುದು ನಮಗೆ ತಿಳಿಸಿದೆ. ಅದನ್ನು ತಕ್ಷಣ ನಿಯಂತ್ರಣಗೊಳಿಸಲು ಸಾಧ್ಯವಿಲ್ಲ ಎನ್ನುವುದೂ ಸತ್ಯ ಎಂದು ಅವರು ಹೇಳಿದರು.
ಕೇರಳದಲ್ಲಿ ಕೋವಿಡ್ ಪರೀಕ್ಷೆಗಳು ಸಾಕಷ್ಟು ಆಗುತ್ತಿಲ್ಲ ಎಂಬ ಆರೋಪವನ್ನು ಆರೋಗ್ಯ ಸಚಿವರು ನಿರಾಕರಿಸಿದರು. ಕೇರಳದಲ್ಲಿ ಆರ್.ಟಿ.ಪಿ.ಸಿ.ಆರ್ ತಪಾಸಣೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಆದರೆ, ಸೌಲಭ್ಯಗಳನ್ನು ಹೆಚ್ಚಿಸಲು ಸಮಯ ಬೇಕಾಗುತ್ತದೆ ಎಂದು ಕೆ.ಕೆ.ಶೈಲಜಾ ಹೇಳಿದರು.