ಈ ಮಾರಕ ಕಾಯಿಲೆಯನ್ನು ಸೂಚಿಸುವ ಇನ್ನಿತರೆ ಲಕ್ಷಣಗಳನ್ನು ನಮೂದಿಸಿದ್ದು, ಈ ಸೂಚನೆಗಳಿಂದ ಶೀಘ್ರವೇ ಪರೀಕ್ಷೆಗೆ ಒಳಪಟ್ಟರೆ ವ್ಯಾಪಕವಾಗಿ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ. ವಾರಿಂಗ್ಟನ್, ಚೆಷೈರ್, ಬ್ರಿಟನ್ ಈ ಹೊಸ ಏಳು ಕೊರೊನಾ ಸೋಂಕಿನ ಲಕ್ಷಣಗಳನ್ನು ಪಟ್ಟಿ ಮಾಡಿವೆ. ಅವುಗಳು ಇಂತಿವೆ.
- ಗಂಟಲು ಕೆರೆತ- ಗಂಟಲು ನೋವಿನೊಂದಿಗೆ ತೀವ್ರ ಗಟಲು ಕೆರೆತ ಕೊರೊನಾ ಸೋಂಕಿನ ಲಕ್ಷಣವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
- ಸ್ನಾಯು ಹಾಗೂ ಸಂಧಿನೋವು ಮೂಳೆಗಳ ವಿಪರೀತ ನೋವು ಹಾಗೂ ಸಂಧಿಗಳ ಸೆಳೆತ ಕೊರೊನಾ ಸೋಂಕಿನ ಲಕ್ಷಣಗಳಲ್ಲಿ ಒಂದು ಎಂದು ತಜ್ಞರು ಪಟ್ಟಿ ಮಾಡಿದ್ದಾರೆ.
- ಬೇಧಿ ಹಾಗೂ ಕಣ್ಣುರಿಯೂತ ಕೂಡ ಸೋಂಕಿನ ಲಕ್ಷಣ ಎನ್ನಲಾಗುತ್ತಿದೆ.
- ವಿಪರೀತ ತಲೆ ನೋವು ಸೋಂಕನ್ನು ಸೂಚಿಸುತ್ತಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
- ಚರ್ಮದಲ್ಲಿ ತುರಿಕೆ ಹಾಗೂ ಬೆರಳು, ಕಾಲ್ಬೆರಳುಗಳ ಬಣ್ಣದಲ್ಲಿ ಬದಲಾವಣೆ ಕಂಡುಬರುವುದು ಕೂಡ ಸೋಂಕಿನ ಸೂಚನೆ ಎಂದು ತಿಳಿದುಬಂದಿದೆ
- ಸೋಂಕಿನ ಸಾಮಾನ್ಯ ಲಕ್ಷಣಗಳು ಯಾವುವು?
ಜ್ವರ, ಒಣಕೆಮ್ಮು, ಸುಸ್ತು ಹಾಗೂ ಉಸಿರಾಟದಲ್ಲಿ ತೊಂದರೆ, ಶೀತ ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣ ಎಂದು ಗುರುತಿಸಲಾಗಿತ್ತು. ಇದೀಗ ಈ ಲಕ್ಷಣಗಳೊಂದಿಗೆ ಸೋಂಕಿನ ಹೊಸ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ.
ಗಂಭೀರ ಲಕ್ಷಣಗಳಿವು
* ಉಸಿರಾಟದಲ್ಲಿ ಏರುಪೇರು ಅಥವಾ ಉಸಿರಾಡಲು ಅಸಾಧ್ಯವೆನಿಸುವುದು
* ಎದೆ ನೋವು
* ಮಾತು ಹಾಗೂ ಚಲನೆ ನಿಲ್ಲುವುದು
ಎಚ್ಚರಿಕೆ ನೀಡಿದ ತಜ್ಞರು
ವಾರಿಂಗ್ಟನ್ ಆರೋಗ್ಯಾಧಿಕಾರಿ ತಾರಾ ರಾಜ್ ಈ ಕುರಿತು ಮಾಹಿತಿ ನೀಡಿದ್ದು, 'ಕೊರೊನಾ ವೈರಸ್ ದೃಢಪಟ್ಟ ವ್ಯಕ್ತಿಗಳಲ್ಲಿ ಈ ಹೊಸ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಈ ಲಕ್ಷಣಗಳನ್ನೂ ನಿರ್ಲಕ್ಷಿಸುವಂತಿಲ್ಲ. ಇಂಥ ಸೂಚನೆಗಳು ದೊರೆಯುತ್ತಿದ್ದಂತೆ ಚಿಕಿತ್ಸೆ ದೊರೆಯುವುದು ಸೂಕ್ತ ಎಂದು ಎಚ್ಚರಿಕೆ ನೀಡಿದ್ದಾರೆ.