ಬದಿಯಡ್ಕ: ನೀರ್ಚಾಲು ಸಮೀಪದ ಬೇಳ ಸರ್ಕಾರಿ ಐಟಿಐ ಕಟ್ಟಡವನ್ನು ಆನ್‍ಲೈನ್‍ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವ ಎ.ಕೆ.ಬಾಲನ್ ವಹಿಸಿದ್ದರು. ಪರಿಶಿಷ್ಟ ಜಾತಿ ಅಭಿವೃದ್ಧಿ ವಿಭಾಗದ ನಿರ್ದೇಶಕ ಪಿ.ಐ.ಶ್ರೀವಿದ್ಯಾ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ವಿತ್ತ ಸಚಿವ ಡಾ.ಟಿ.ಎಂ ಥಾಮಸ್ ಐಸಾಕ್ ಭಾಗವಹಿಸಿದ್ದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಫಲಕವನ್ನು ಅನಾವರಣಗೊಳಿಸಿ, ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ.ಸೈಮಾ, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಿ.ಎಸ್. ಶಾಂತಾ, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಎಂ.ಅಶ್ವಿನಿ ಮತ್ತು ವಾರ್ಡ್ ಸದಸ್ಯ ಕೆ.ವಿ.ಸ್ವಪ್ನಾ ಉಪಸ್ಥಿತರಿದ್ದು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪುನೀತ್ ಕುಮಾರ್ ಸ್ವಾಗತಿಸಿ, ಎಸ್.ಕೆ. ಮಿನಾರಾಣಿ ವಂದಿಸಿದರು.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಕಾಸರಗೋಡು ಬೇಳ ಐಟಿಐ ಕಟ್ಟಡ ಪೂರ್ಣಗೊಂಡು ಅಲ್ಪಾವಧಿಯಲ್ಲಿ ಉದ್ಘಾಟನೆಗೊಂಡಿದೆ. ಇಲ್ಲಿ ಶೇ 80 ರಷ್ಟು ಪರಿಶಿಷ್ಟ ಜಾತಿ, ಶೇ 10 ರಷ್ಟು ಪ.ವರ್ಗ ಮತ್ತು 10 ಶೇಕಡಾ ಇತರ ಜಾತಿ ವಿದ್ಯಾರ್ಥಿಗಳು ಕಲಿಕೆ ನಿರ್ವಹಿಸುತ್ತಿದ್ದಾರೆ. ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗೆ ರೂ 1000 ಏಕರೂಪದ ರೂ 100 ಮತ್ತು ಮಾಸಿಕ 830 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಪೌಷ್ಠಿಕಾಂಶ ಯೋಜನೆಯ ಅನ್ವಯ ತರಬೇತಿ ಪಡೆದವರಿಗೆ ಪ್ರತಿದಿನ ಮೊಟ್ಟೆ, ಹಾಲು ಮತ್ತು ಮಧ್ಯಾಹ್ನದ ಊಟವನ್ನು ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಳಿಸಿದವರಿಗೆ ಎನ್.ಸಿ.ವಿ.ಟಿ. ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.ಪ್ರತಿಭಾನ್ವಿತರಿಗೆ ವಿವಿಧ ಸರ್ಕಾರಿ ನಿಯೋಜನೆಗಳನ್ನು ನೀಡಲಾಗುತ್ತದೆ.