ಬದಿಯಡ್ಕ: ಗುರುಹಿರಿಯರ ಆಶೀರ್ವಾದ ಅನುಗ್ರಹವಿದ್ದರೆ ಏನನ್ನೂ ಸಾಸಲು ಸಾಧ್ಯವಿದೆ. ಹಿರಿಯರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಪಂಚಾಯಿತಿ ಸದಸ್ಯೆ ಶೈಲಜಾ ಭಟ್ ತಿಳಿಸಿದರು.
ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ಬದಿಯಡ್ಕ ಹಗಲು ಮನೆಯಲ್ಲಿ ನೂತನ ಜನಪ್ರತಿನಿಧಿಗಳಿಗೆ ನಡೆದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯರ ಆಶೀರ್ವಾದವನ್ನು ಪಡೆಯುವುದು ನಮ್ಮ ಧರ್ಮವಾಗಿದೆ. ಜನಪ್ರತಿನಿಧಿಗಳಿಗೆ ನೀಡಿದ ಈ ಅನುಗ್ರಹವು ಜನಸೇವೆಯಲ್ಲಿ ತೊಡಗಿಕೊಳ್ಳಲು ನಮಗೆ ಹೆಚ್ಚಿನ ಬಲವನ್ನು ತುಂಬಲಿದೆ ಎಂದರು.
ಹಿರಿಯ ನಾಗರಿಕರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಟಿ.ಪಿ. ಅಡಿಯೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಿರಿಯ ಜೀವಗಳ ಕಷ್ಟಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಿ ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ತಿಳಿಸಿದರು. ವೇದಿಕೆಯ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಜೊತೆಕಾರ್ಯದರ್ಶಿ ಗಂಗಾಧರ ಪಿಲಿಕೋಡು, ಹಿರಿಯರಾದ ಪಿ.ಜಿ.ಚಂದ್ರಹಾಸ ರೈ ಪೆರಡಾಲ ಶುಭಹಾರೈಸಿ ಮಾತನಾಡಿದರು. ಜನಪ್ರತಿನಿಧಿಗಳಾದ ಗ್ರಾಪಂ ಉಪಾಧ್ಯಕ್ಷ ಅಬ್ಬಾಸ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ಸೌಮ್ಯ ಮಹೇಶ್, ಮಾಜಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಹಮೀದ್ ಪಳ್ಳತ್ತಡ್ಕ, ಡಿ.ಶಂಕರ, ಬಾಲಕೃಷ್ಣ ಶೆಟ್ಟಿ ಕಡಾರು ಮಾತನಾಡಿದರು. ಬ್ಲಾಕ್ ಪಂ. ಸದಸ್ಯರುಗಳಾದ ಜಯಂತಿ, ಅಶ್ವಿನಿ, ಜನಪ್ರತಿನಿಧಿಗಳಾದ ಈಶ್ವರ ನಾಯ್ಕ ಪೆರಡಾಲ, ಜ್ಯೋತಿಕುಮಾರಿ, ಅನಿತಾ, ಶುಭಲತಾ ರೈ, ರಶೀದಾ, ರವಿಕುಮಾರ್ ರೈ, ಅನಸೂಯ, ಸ್ವಪ್ನಾ ಪಾಲ್ಗೊಂಡರು. ವೇದಿಕೆಯ ಉಪಾಧ್ಯಕ್ಷ ಈಶ್ವರ ಭಟ್ ಪೆರ್ಮುಖ ಸ್ವಾಗತಿಸಿ, ಮೈರ್ಕಳ ನಾರಾಯಣ ಭಟ್ ವಂದಿಸಿದರು. ಕಾರ್ಯದರ್ಶಿ ಶಂಕರನಾರಾಯಣ ಭಟ್ ಸಂಪತ್ತಿಲ ನಿರೂಪಿಸಿದರು.