ಬೆಂಗಳೂರು: ಬಿನೀಶ್ ಕೋಡಿಯೇರಿ ಮುಹಮ್ಮದ್ ಅನೂಪ್ ನ ಯಜಮಾನನಾಗಿದ್ದು(ಬಾಸ್)ಬಿನೀಶ್ ಏನು ಹೇಳಿದರೂ ಅದನ್ನು ಚಾಚೂ ತಪ್ಪದೆ ಮಾಡಲು ಮುಹಮ್ಮದ್ ಅನೂಪ್ ತಯಾರಾಗಿರುತ್ತಿದ್ದ ಎಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಿನೀಶ್ ವಿರುದ್ಧ ಇಡಿ ಇಂದು ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಈ ಬಗ್ಗೆ ವಿವರಿಸಲಾಗಿದೆ.
ಬಿನೀಶ್ ಕಾನೂನು ವಿರುದ್ದವಾದ ಅಮಲು ವಸ್ತು ವ್ಯವಹಾರ ಹಾಗೂ ವಂಚನಾ ಹಣ ನಿರ್ವಹಣೆಯಲ್ಲೂ ಸಕ್ರಿಯನಾಗಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಲ್ಲಿ ಅಮಲು ವಸ್ತು ಮಾಫಿಯಾಗಳಿಗೆ ಕೇರಳ ಸರ್ಕಾರದ ಕರಾರು ಮಾಹಿತಿ ಪಡೆಯಲು ಪ್ರಕರಣದ ಆರೋಪಿಗಳು ಹಾಗೂ ಮತ್ತಿತರರು ಬಿನೀಶ್ ನೊಂದಿಗೆ ಮಾತುಕತೆ ನಡೆಸಿದ್ದರು. ಅವರೊಳಗಿನ ಒಪ್ಪಂದದಂತೆ ಶೇ.4 ರಷ್ಟು ಕಮಿಷನ್ ಬಿನೀಶ್ ಗೆ ನೀಡುವ ಬಗ್ಗೆ ವಾಗ್ದಾನ ನಡೆದಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶೀಘ್ರ ತನಿಖೆ ನಡೆಸಲಾಗುವುದೆಂದು ತಿಳಿಸಲಾಗಿದೆ.