ಕಳಮಸ್ಸೇರಿ: ಕೋವಿಡ್ ರಕ್ಷಣೆಯ ಮುಖ್ಯ ಅಸ್ತ್ರವಾದ ಮಾಸ್ಕ್ ಗಳನ್ನು ಇನ್ನು ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳಿಗೆ ರಕ್ಷಾಕವಚವಾಗಿ ಬಳಸುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲಾಗಿದೆ. ಎಸೆಯಲ್ಪಡುವ ಮಾಸ್ಕ್ ಈ ಮೂಲಕ ಮರುಬಳಕೆಯಾಗಲು ಸಾಧ್ಯವಾಗಲಿದೆ.
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಹೊಸ ತಂತ್ರಜ್ಞಾನದ ಅಭಿವೃದ್ಧಿಪಡಿಸುವುದರೊಂದಿಗೆ ಇಂತಹದೊಂದು ಅವಕಾಶಕ್ಕೆ ದಾರಿ ಮಾಡಿಕೊಟ್ಟಿದೆ. ಮಾಸ್ಕ್ ನಿಂದ ಪಡೆದ ಪ್ಲಾಸ್ಟಿಕ್ ನ್ನು ರಬ್ಬರ್ ನೊಂದಿಗೆ ಬೆರೆಸಿ ಪಾಲಿಮರ್ ಮಿಶ್ರಣವನ್ನು ರೂಪಿಸಲಾಗುತ್ತದೆ. ಇದನ್ನು ಯುದ್ಧ ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿ ಡ್ಯಾಶ್ ಬೋರ್ಡ್‍ಗಳು ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಾರ್ ಬಂಪರ್‍ಗಳಿಗೆ ಸುರಕ್ಷತಾ ರಕ್ಷಾಕವಚ ಸೇರಿದಂತೆ ಹಲವಾರು ತಾಂತ್ರಿಕವಾಗಿ ಸುಧಾರಿತ ಉತ್ಪನ್ನಗಳನ್ನು ತಯಾರಿಸಲು ಅವುಗಳನ್ನು ಬಳಸಬಹುದಾಗಿದೆ.
ಕುಸಾಟ್ ಪಾಲಿಮರ್ ವಿಜ್ಞಾನ ಮತ್ತು ರಬ್ಬರ್ ತಂತ್ರಜ್ಞಾನದ ಪೆÇ್ರ.ಪ್ರಶಾಂತ್ ರಾಘವನ್ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು. ಮಾಸ್ಕ್ ಗಳಿಂದ ಪಡೆದ ಪ್ಲಾಸ್ಟಿಕ್ ನಾರುಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ವಿಧಾನದಲ್ಲಿ ರಬ್ಬರ್‍ಗೆ ಸೇರಿಸಲಾಗುತ್ತದೆ. ವಿವಿಧ ರೀತಿಯ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಪಾಲಿಮರ್ ಮಿಶ್ರಣಗಳನ್ನು ಮಾರ್ಪಡಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿರುವರು.