ಕುಂಬಳೆ: ಕುಂಬಳೆ ಸಮುದಾಯ ಆರೋಗ್ಯ ಕೇಂದ್ರ(ಸಿಎಚ್‍ಸಿ)ದ ಆಶ್ರಯದಲ್ಲಿ ಜನವರಿ 31 ರಂದು ಪಲ್ಸ್ ಪೋಲಿಯೊ ಹನಿಗಳನ್ನು ನೀಡಿದ ಮಕ್ಕಳಿಂದ ಲಾಟರಿಯಿಂದ ಆಯ್ಕೆಯಾದ ಕಳತ್ತೂರು ಉಬ್ಬತೋಡಿ ಮನೆಯ ಅಬ್ದುಲ್ ಸನಾದ್ ಅವರಿಗೆ ಚಿನ್ನದ ನಾಣ್ಯ ಬಹುಮಾನವಾಗಿ ದೊರಕಿತು.
ನಾಲ್ಕರ ಹರೆಯದ ಸನಾದ್ ಶರೀಫಾ- ಅಶ್ರಫ್ ದಂಪತಿಗಳ ಪುತ್ರ. ಚಿನ್ನದ ನಾಣ್ಯವನ್ನು ಪುಟಾಣಿ ಅಬ್ದುಲ್ ಸನಾದ್ ಗೆ ಕುಂಬಳೆ ಸಮುದಾಯ ಕೇಂದ್ರದ ಪ್ರಧಾನ ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಅವರು ಗುರುವಾರ ಹಸ್ತಾಂತರಿಸಿದರು.
ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಅಕುರ್ ಡಯಾಗ್ನೋಸ್ಟಿಕ್ ಮುಖ್ಯ ಪ್ರಬಂಧಕ ಅಬ್ದುಲ್ ಖಾದರ್ ಕಟ್ಟತ್ತಡ್ಕ, ಲ್ಯಾಬ್ ಟೆಕ್ನಿಷಿಯನ್ ಸಿಂಧು ನಾಯಕ್, ಪಿ.ಎಚ್.ಎನ್ ಮೇಲ್ವಿಚಾರಕ ಜೈನಮ್ಮ ಥಾಮಸ್, ಆರೋಗ್ಯ ನಿರೀಕ್ಷಕ ಕುರಿಯಕೋಸ್ ಈಪನ್, ಕಿರಿಯ ಆರೋಗ್ಯ ನಿರೀಕ್ಷಕರು ವೈ.ಹರೀಶ್, ಕೆ.ಕೆ. ಆದರ್ಶ್, ಕೆ.ವಿವೇಕ್ ತಚ್ಚಲ್, ಅಖಿಲ್ ಕಾರಾಯಿ, ವಾಸು ಬೋವಿಕ್ಕಾನ, ಜೆ.ವಿ.ಎಚ್.ಎಲ್.ಎಸ್.ಶಾರದ, ಸಿಬ್ಬಂದಿ ರವಿಕುಮಾರ್, ವಿ.ಆರ್.ಒ.ಕೀರ್ತನ, ವಿಲ್ಪ್ರೆಡ್ ಮೊದಲಾದವರು ಉಪಸ್ಥಿತರಿದ್ದರು.