ಮುಳ್ಳೇರಿಯ: ವ್ಯಾಪಾರಿಗಳ ಹಿತ ದೃಷ್ಟಿ ಕಾಪಾಡಿಕೊಳ್ಳುವುದರ ಜತೆಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ವ್ಯಾಪಾರಿ ಸಮಿತಿ ಶ್ರಮಿಸಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾಘಟಕ ಉಪಾಧ್ಯಕ್ಷ ಅಹಮ್ಮದ್ ಶರೀಫ್ ತಿಳಿಸಿದ್ದಾರೆ.
ಅವರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಡೂರು ಘಟಕದ ವಾರ್ಷಿಕ ಮಹಾಸಭೆ, ಕಚೇರಿಯ ಎಕ್ಸಿಕ್ಯೂಟಿವ್ ಕೊಠಡಿ ಉದ್ಘಾಟನೆ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಘಟಕ ಅಧ್ಯಕ್ಷ ಮೊಯ್ದೀನ್‍ಕುಞÂ ಎ. ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇಲಂಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಅಭಿನಂದನೆ ನಡೆಯಿತು. ವ್ಯಾಪಾರಿ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಮಣಿಪಾಲ್ ಆಸ್ಪತ್ರೆಯ ಕೆಎಂಸಿ ಲಾಯಲ್ಟಿ ಆರೋಗ್ಯ ಕಾರ್ಡು ವಿತರಣೆಯನ್ನು ಜಿಲ್ಲಾಸಮಿತಿ ಪದಾಧಿಕಾರಿ ಕೆ.ಜಿ ಶಾಜಿ ನೆರವೇರಿಸಿದರು. ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಪಿ ಉಷಾ, ಗ್ರಾಪಂ ಸದಸ್ಯರಾದ ಪ್ರಮಿಳಾ ಸಿ.ನಾಯ್ಕ್, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪದಾಧಿಕಾರಿಗಳಾದ ಎಸ್. ಸಿ ಚಂದ್ರಶೇಖರ್‍ಮ ಅಹಮ್ಮದ್ ಇಕ್ಬಾಲ್, ಸಂತೋಷ್, ಎ.ಟಿ ಅಬ್ದುಲ್ಲ, ದಿವ್ಯಾ, ಶ್ರೀಲಕ್ಷ್ಮೀ, ಅನಸ್ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭ ವ್ಯಾಪಾರಿ ವೆಲ್ಫೇರ್ ಸೊಸೈಟಿಯ 2021-23ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.